ಕೋಲಾರ: 95% ರಷ್ಟು ಜನರಿಗೆ ಜಾತಿಗಣತಿಯಿಂದ ಖುಷಿ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಜನ ಎಷ್ಟು ಇದ್ದಾರೆ ಅನ್ನೋದು ಇದರಿಂದ ತಿಳಿಯಲಿದೆ. ಇನ್ನೂ 95% ರಷ್ಟು ಜನರಿಗೆ ಜಾತಿಗಣತಿಯಿಂದ ಖುಷಿ ಆಗಿದೆ. ಆದರೆ ಬಿಜೆಪಿಯವರಿಗೆ ಮಾಡುವ ಯೋಗ್ಯತೆ ಇಲ್ಲ,
ಏನಾದರೂ ಮಾಡಿದ್ರೆ ಸಹಿಸಿಕೊಳ್ಳಲ್ಲ. ಈ ಹಿಂದೆ ಗ್ಯಾರಂಟಿಗಳನ್ನು ಕೊಟ್ಟಾಗ ಹೀಗೆಯೇ ಮಾತನಾಡಿದ್ದರು. ಲೋಕಸಭೆ ಚುನಾವಣೆಗೆ ನಿಲ್ಲುತ್ತದೆ ಎಂದು ಹೇಳಿದ್ದರು. ಆದರೆ ಈಗ ಎಲ್ಲರಿಗೂ ಗ್ಯಾರಂಟಿ ಸಿಗುತ್ತಿದೆ. ರಾಜ್ಯದ ಜನರೆಲ್ಲರೂ ಖುಷಿಯಾಗಿದ್ದಾರೆ, ನನ್ನ ವೈಯುಕ್ತಿಕವಾಗಿ ಇದು ಸರಿಯಿದೆ ಎಂದರು.
ನನ್ನ ವೈಯಕ್ತಿಕ ವಿಚಾರ ಹೇಳುವುದಾದರೇ, ಜಾತಿಗಣತಿಗೆ ನನ್ನ ಒಪ್ಪಿಗೆ ಇದೆ. ಇದೇ 17ರಂದು ಎಲ್ಲಾ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಇದರಲ್ಲಿ ನನ್ನ ಒಪ್ಪಿಗೆ ಇದೆ. ಅಲ್ಲದೇ ಇದೇ ತಿಂಗಳ 17ರಂದು ವಿಶೇಷ ಸಚಿವ ಸಂಪುಟ ಸಭೆಯನ್ನ ಕರೆಯಲಾಗಿದೆ. ಇದರಲ್ಲಿ ಎಲ್ಲಾ ಸಚಿವರು ಜಾತಿಗಣತಿಗೆ ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ ಎಂದರು.