ಇದ್ದೂರಲ್ಲೇ ನರೇಗಾ ಕೆಲಸ : ಸೋಮಶೇಖರ್ ಬಿರಾದರ್

0
narega
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ಗ್ರಾಮದಲ್ಲಿ ಹಬ್ಬ, ಜಾತ್ರೆ ಬಂದರೆ ಇಡೀ ಊರಿಗೆ ಊರೇ ಸ್ವಯಂ ಪ್ರೇರಣೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಹಬ್ಬ ಮತ್ತು ಜಾತ್ರೆಗಳನ್ನು ಯಶಸ್ವಿಗೊಳಿಸುತ್ತಾರೆ.

Advertisement

ಹಾಗೆಯೇ ಲೋಕಸಭೆ ಚುನಾವಣೆಯ ಮತದಾನದ ದಿನ ನಮ್ಮೂರಿನ ಹಬ್ಬ ಬಂದಿದೆ ಎಂದು ಎಲ್ಲ ಮತದಾರರನ್ನು ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುವ ಕೆಲಸ ಪ್ರತಿಯೊಬ್ಬ ಕೂಲಿಕಾರರಿಂದ ಆಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಸೋಮಶೇಖರ್ ಬಿರಾದರ್ ಹೇಳಿದರು.

ತಾಲೂಕಿನ ಬೈರನಹಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ನಡೆದ ಮತದಾನ ಜಾಗೃತಿ ಚಟುವಟಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೇಸಿಗೆಯಲ್ಲಿ ತಂಡೋಪತಂಡವಾಗಿ ನರೇಗಾ ಕೆಲಸಕ್ಕೆ ಬರುವ ಕೂಲಿಕಾರರು ಮತದಾನ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡಿರಬೇಕು. ಇದಕ್ಕಾಗಿ ಮತದಾನ ಜಾಗೃತಿ ಬಗ್ಗೆ ತಾ.ಪಂ ಸ್ವೀಪ್ ಸಮಿತಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬ ಕೂಲಿಕಾರರು ಕಾಮಗಾರಿ ಸ್ಥಳದಲ್ಲಿ ತಿಳಿದುಕೊಳ್ಳುವ ಮತದಾನ ಜಾಗೃತಿ ಕುರಿತಾದ ವಿಷಯವನ್ನು ಪ್ರತಿ ಮನೆ-ಮನೆಗೂ ತಲುಪಿಸುವ ಕೆಲಸ ಮಾಡಬೇಕು. ಹೀಗಾದಾಗ ಪ್ರತಿಯೊಬ್ಬರೂ ತಮಗೆ ಸಂವಿಧಾನ ನೀಡಿದ ಮತದಾನದ ಹಕ್ಕಿನ ಅರಿವು ಆಗುತ್ತದೆ. ಹಾಗಾದಾಗ ಮಾತ್ರ ದೇಶಕ್ಕೆ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಕೆಲಸವಾಗುತ್ತದೆ ಎಂದರು.

ನರೇಗಾ ಕಾಮಗಾರಿ ಸ್ಥಳದಲ್ಲಿದ್ದ 300ಕ್ಕೂ ಅಧಿಕ ಕೂಲಿಕಾರರಿಗೆ ಮತದಾನ ಜಾಗೃತಿ ಕುರಿತಾದ ಪ್ರತಿಜ್ಞಾವಿಧಿಯನ್ನು ಬೈರನಹಟ್ಟಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಮಾರಿ ನಾಗವೇಣಿ ಅವರು ಬೋಧಿಸಿದರು. ಈ ಸಂದರ್ಭದಲ್ಲಿ ತಾ.ಪಂ ನರೇಗಾ ಸಿಬ್ಬಂದಿ ವರ್ಗ, ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಬೇಸಿಗೆ ಇದೆ, ಹೊಲದಲ್ಲಿ ಕೆಲಸ ಇಲ್ಲ ಎಂಬ ಚಿಂತೆ ಗ್ರಾಮಸ್ಥರಿಗೆ ಬರುವುದು ಬೇಡ. ಇದ್ದೂರಲ್ಲೇ ನರೇಗಾ ಕೆಲಸ ಆರಂಭವಾಗಿವೆ. ಇದರ ಸದೂಪಯೋಗವನ್ನು ಗ್ರಾಮದ ಎಲ್ಲ ಕೂಲಿಕಾರರು ಪಡೆದುಕೊಳ್ಳಬೇಕು. ಬೇಸಿಗೆ ಅವಧಿಯ ಕನಿಷ್ಠ 60 ದಿನಗಳ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದರೆ 20940 ರೂಪಾಯಿ ಸಿಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸಂಕಷ್ಟವನ್ನು ನೀಗಿಸಿಕೊಳ್ಳುವ ಕೆಲಸವಾಗುತ್ತದೆ ಎಂದು ತಿಳಿಹೇಳಿದರು.


Spread the love

LEAVE A REPLY

Please enter your comment!
Please enter your name here