ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇಶದ ಸಮರ್ಥ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾಧಕರಿಂದ ದೇಶದ ರಕ್ಷಣೆ, ಭ್ರಷ್ಟಾಚಾರ ರಹಿತ ಆಡಳಿತ, ರೈತರು ಹಾಗೂ ಎಲ್ಲ ವರ್ಗದ ಜನರ ಕಲ್ಯಾಣ ಸೇರಿದಂತೆ ದೇಶದ ಸರ್ವತೋಮುಖ ಅಭಿವೃದ್ಧಿಗೆ, ಜನತೆಯ ಬದುಕಿನ ಭದ್ರತೆಗೆ ಗ್ಯಾರಂಟಿಯಾಗಿದ್ದಾರೆ. ಕೇಂದ್ರ ಸರಕಾರ ಆಶ್ರಯ ಮನೆ, ಶೌಚಾಲಯ, ಅಡುಗೆ ಸಿಲಿಂಡರ್, ಜಲಜೀವನ ಮಷಿನ್ ಇತ್ಯಾದಿ ಯೋಜನೆಗಳು ಜನರಿಗೆ ಗ್ಯಾರಂಟಿಗಳಾಗಿವೆ. ನಾವೆಲ್ಲ ಭಾರತ ಮಾತೆಯ ಮಕ್ಕಳು, ಭಾರತ ಮಾತೆಯ ಸೇವೆ ಮಾಡೋಣ ಎಂದು ಮಾಜಿ ಸಿಎಂ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಸೋಮವಾರ ಲಕ್ಷ್ಮೇಶ್ವರತಾಲೂಕು ವ್ಯಾಪ್ತಿಯ ಬಸಾಪೂರ, ರಾಮಗಿರಿ, ಶಿಗ್ಲಿ, ದೊಡ್ಡೂರು, ಸೂರಣಗಿ, ಬಾಲೇಹೊಸೂರು ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಮಾತನಾಡಿದರು.
ತಮ್ಮ ತಂದೆಯ ಕಾಲದಿಂದಲೂ ಶಿಗ್ಲಿ ಗ್ರಾಮದೊಂದಿಗೆ ಉತ್ತಮ ಬಾಂಧವ್ಯವಿದೆ. ರಾಜಕೀಯವಾಗಿ ಬಹಳಷ್ಟು ಪ್ರಜ್ಞೆ ಇರುವ ಗ್ರಾಮವಿದು. ನಮ್ಮ ತಂದೆಯವರ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ವಿ.ಪಿ. ಬಳಿಗಾರ ಅವರು ದಕ್ಷ ಅಧಿಕಾರಿಯಾಗಿದ್ದರು ಎಂದು ಸ್ಮರಿಸಿದರು. ತಮ್ಮ ಅವಧಿಯಲ್ಲಿ ರೈತರ ಮಕ್ಕಳಿಗೆ ನೀಡಿದ ವಿದ್ಯಾನಿಧಿ ಯೋಜನೆಯಿಂದ 13 ಲಕ್ಷ ರೈತರ ಮಕ್ಕಳಿಗೆ ಅನಕೂಲವಾಗಿದೆ. ಕಿಸಾನ ಸಮ್ಮಾನ ಯೋಜನೆ, ಸಂಧ್ಯಾ ಸುರಕ್ಷಾ, ಅಂಗವಿಕಲರಿಗೆ ಮಾಶಾಸನ ಹೆಚ್ಚಳ, ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿಯರಿಗೆ ಗೌರವಧನದಲ್ಲಿ ಹೆಚ್ಚಳ ಮಾಡಲಾಗಿತ್ತು. ಹಾವೇರಿ ಮತಕ್ಷೇತ್ರದ ಬೇಕು-ಬೇಡಿಕೆಗಳ ಅರಿವಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಕನಸು ಹೊಂದಿದ್ದೇನೆ. ಬಿಜೆಪಿಗೆ ಮತ ನೀಡಿ ನರೇಂದ್ರ ಮೋದಿಯವರ ಕೈ ಬಲಪಡಿಸಿ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಸಿ. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಸಣ್ಣೀರಪ್ಪ ಹಳ್ಳೆಪ್ಪನವರ, ಸೋಮಣ್ಣ ಡಾಣಗಲ್, ಡಿ.ವೈ. ಹುನಗುಂದ, ಬಿ.ಡಿ. ಪಲ್ಲೇದ, ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಶಕ್ತಿ ಕತ್ತಿ, ಅನಿಲ ಮುಳಗುಂದ, ಬಸವರಾಜ ಚಕ್ರಸಾಲಿ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ನಿಂಗಪ್ಪ ಬನ್ನಿ, ಎಂ.ಎಸ್. ದೊಡ್ಡಗೌಡ್ರ, ಪ್ರಕಾಶ ಮಹಾಜನಶೆಟ್ಟರ, ಶಂಕರಣ್ಣ ಕಾಳೆ, ನೀಲೇಶ ಕಾಳೆ, ಅಶೋಕ ಶಿರಹಟ್ಟಿ, ನಿಂಗಪ್ಪ ಹುನಗುಂದ, ಹೆಚ್.ಎಫ್. ತಳವಾರ, ಸಿದ್ದಣ್ಣ ಯಲಿಗಾರ, ಎಸ್.ಕೆ. ಕಾಳಪ್ಪನವರ, ವೀರಣ್ಣ ಪವಾಡದ, ಈರಣ್ಣ ಅಕ್ಕೂರ, ಶಂಭು ಹುನಗುಂದ, ಪ್ರಕಾಶ ಜಾವೂರ, ಮಾಂತೇಶ ಜಾವೂರ, ಮಂಜುನಾಥ ಪೂಜಾರ, ಬಸವರಾಜ ಬಳಿಗಾರ, ಮರಿಯಪ್ಪ ವಾಲ್ಮೀಕಿ, ಮಂಜಯ್ಯ ಪೂಜಾರ, ಪುತ್ರಪ್ಪ ಹುಬ್ಬಳ್ಳಿ, ಬೂದಪ್ಪ ವಾಲ್ಮೀಕಿ, ಭೀಮಪ್ಪ ಯಂಗಾಡಿ, ಮೈಲಾರಪ್ಪ ಕಾಳೆ, ಚಿದಾನಂದ ಮಲ್ಲೂರ, ಜಗದೀಶ ಕುಮಸಿ, ಚನ್ನಬಸಪ್ಪ ಲಿಂಗಶೆಟ್ಟಿ, ನೀಲೇಶ ಕಾಳೆ, ಬೀರಪ್ಪ ಕೆರೂರ, ಬಸವರಾಜ ಇಟಗಿ, ಶಿವಲಿಂಗಯ್ಯ ಕಳಸದಮಠ, ಮಂಜುನಾಥ ಮೂಲಿಮನಿ, ವೀರೇಶ ಕಳ್ಳಿಹಾಳ, ಕುಮಾರ ಬೆಟಗೇರಿ, ವೀರಣ್ಣ ಮೇಗಿಲಮನಿ, ಚಂದ್ರಣ್ಣ ಸೂರಣಗಿ, ಮಾರುತಿ ಸತ್ಯಮ್ಮನವರ, ಜಿ.ಆರ್.ಕುಬೇರ, ನಾಗಯ್ಯ, ನಿಂಗಪ್ಪ ಪ್ಯಾಟಿ, ವಿರುಪಾಕ್ಷಪ್ಪ ಮರಳಿಹಳ್ಳಿ, ವಿನಾಯಕ ಶಿರೋಳ, ಮಂಜು ಅತ್ತಿಗೇರಿ, ರಮೇಶ ಜೋಗೇರ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರಿದ್ದರು.
ಪಾಕಿಸ್ತಾನದ ಜನರು ಕೂಡ ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿಯಾದಬೇಕು ಎಂದು ಮನವಿ ಮಾಡುತ್ತಾರೆ. ಇಡೀ ವಿಶ್ವವೇ ಅವರ ಆಡಳಿತ ವೈಖರಿ ಮೆಚ್ಚಿದೆ, ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಕಬಡ್ಡಿ ಅಖಾಡದಲ್ಲಿ ಎದುರಿಗೆ ಆಟವಾಡಲು ಆಟಗಾರರೇ ಇಲ್ಲ. ನಮ್ಮ ಕಡೆ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಆದರೆ ಪ್ರತಿಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ.
– ಬಸವರಾಜ ಬೊಮ್ಮಾಯಿ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.