ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳ್ಳಿ ಉತ್ಸವ ಮೂರ್ತಿ ಪೂಜಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿಯ ಅಧ್ಯಕ್ಷ ಸಿ.ಕೆ. ಮಾಳಶೆಟ್ಟಿ, ಜಾತ್ರಾ ಕಮಿಟಿಯ ಅಧ್ಯಕ್ಷ ಜಗದೀಶ ಪೂಜಾರ, ಸಮಿತಿಯ ಸದಸ್ಯರಾದ ಎಸ್.ಬಿ. ಹಡಗಲಿ, ಎಸ್.ಬಿ. ಕಣವಿ, ಎಂ.ಡಿ. ದೇಸಾಯಿಗೌಡ್ರ, ಪಿ.ಎಸ್. ಕುರಹಟ್ಟಿ, ಬಸವರಾಜ ನರೇಗಲ್ಲ, ಜೆ.ಕೆ. ತಮ್ಮಣ್ಣವರ, ವಾಯ್.ಕೆ. ಪಿಡಗಣ್ಣವರ, ಪಿ.ಬಿ. ಹಿರೇಮಠ, ಹೆಚ್.ಬಿ. ಶಿರಗುಂಪಿ, ಎಸ್.ಎಸ್. ಹೊಳೆಯಣ್ಣವರ, ಆರ್.ಬಿ. ಕುಲಕರ್ಣಿ, ಗುರಣ್ಣ ಕಲಕೇರಿ, ಮಹಾಂತೇಶ ಬೆಳಗಲಿ, ಮುತ್ತು ಮಾಲಗಿತ್ತಿ, ಕಿರಣ ಆರಟ್ಟಿ, ಬಸವರಾಜ ಅಣ್ಣಿಗೇರಿ, ಆನಂದ ಕಂಪ್ಲಿ, ಹಿರಿಯ ಮುಖಂಡರಾದ ಶಶಿಧರ ದಿಂಡೂರ, ರಾಜು ಪರಮಣ್ಣವರ, ಸುನೀಲ ಕುಂದಗೋಳ ಸೇರಿದಂತೆ ಶ್ರೀ ಕರಿಯಮ್ಮದೇವಿ ದೇವಸ್ಥಾನ ಸುಧಾರಣಾ ಸಮಿತಿ ಹಾಗೂ ಜಾತ್ರಾ ಕಮಿಟಿಯ ಸರ್ವ ಸದಸ್ಯರು, ಓಣಿಯ ಹಿರಿಯರು, ಸದ್ಭಕ್ತರು ಉಪಸ್ಥಿತರಿದ್ದರು.



