ಸನ್ಮಾರ್ಗ ಕಾಲೇಜಿಗೆ ಉತ್ತಮ ಫಲಿತಾಂಶ

0
sanmarga
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಸ್ಟುಡೆಂಟ್ ಎಜುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

Advertisement

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು ಸರಾಸರಿ ಶೇ.90 ಆಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.96.17 ಅಂಕ ಗಳಿಸಿದ ಅಕ್ಷತಾ ಅಂಗಡಿ ಪ್ರಥಮ, ಶೇ.95.83 ಅಂಕಗಳೊಂದಿಗೆ ಲಕ್ಷ್ಮಿನರಸಿಂಹ ಹಲಗಿ ದ್ವಿತೀಯ ಹಾಗೂ ಕಾರ್ತಿಕ ಮಠಪತಿ ಶೇ.95.5 ಅಂಕ ಪಡೆದು ತೃತೀಯ ಸ್ಥಾನಗಳಿಸಿದ್ದಾರೆ.result

ವಾಣಿಜ್ಯ ವಿಭಾಗದಲ್ಲಿ ಒಟ್ಟು ಶೇ.97 ಗಳಿಸಿದ ಅಪೇಕ್ಷಾ ಪಾಲನಕರ ಪ್ರಥಮ, ಶೇ.95.67 ಅಂಕ ಗಳಿಸಿದ ಮೇಘಾ ಲಕ್ಷ್ಮಿಪುರ ದ್ವಿತೀಯ ಹಾಗೂ ಶೇ.95 ಅಂಕ ಗಳಿಸಿದ ಅಮೃತಾ ಪಾಟೀಲ ತೃತೀಯ ಸ್ಥಾನ ಗಳಿಸಿದ್ದಾರೆ.

ಈ ವರ್ಷದ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಮಹಾವಿದ್ಯಾಲಯದಿಂದ ಪರೀಕ್ಷೆಗೆ ಕುಳಿತ ಒಟ್ಟು ವಿದ್ಯಾರ್ಥಿಗಳಲ್ಲಿ 46 ಉನ್ನತ ಶ್ರೇಣಿಯಲ್ಲಿ, 136 ಪ್ರಥಮ ಶ್ರೇಣಿಯಲ್ಲಿ, 24 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪೇಮಾನಂದ ರೋಣದ, ಪದಾಧಿಕಾರಿಗಳಾದ ಪ್ರೊ. ರೋಹಿತ ಒಡೆಯರ್, ಪ್ರೊ. ರಾಹುಲ ಒಡೆಯರ್, ಪ್ರೊ. ಸೈಯದ ಮತಿನ್ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ, ಆಡಳಿತಾಧಿಕಾರಿಗಳಾದ ಎಂ.ಸಿ. ಹಿರೇಮಠ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here