ವಿಜಯಸಾಕ್ಷಿ ಸುದ್ದಿ, ಹಾವೇರಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ರಾಜಶೇಖರಯ್ಯ ಹಿರೇಮಠ ದಂಪತಿಗಳ ಪುತ್ರನ ಸಂಪೂರ್ಣ ಶ್ರವಣ ದೋಷ ನಿವಾರಣೆ ಚಿಕಿತ್ಸೆಗೆ 8.50 ಲಕ್ಷ ರೂ. ನೆರವು ನೀಡಿದನ್ನು ಸ್ಮರಿಸಿ, ಸವಣೂರಿನಲ್ಲಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಬಸವರಾಜ ಬೊಮ್ಮಾಯಿಯವರು ಅಧಿಕಾರದಲ್ಲಿದ್ದಾಗ ಹಿರೇಮಠ ದಂಪತಿ ತಮ್ಮ ಮಗ ವಿನಯ ಹಿರೇಮಠನಿಗೆ ಶ್ರವಣ ದೋಷವಿದ್ದು, ಕಿವಿ ಸಂಪೂರ್ಣವಾಗಿ ಕೇಳುವುದಿಲ್ಲ. ಹೀಗಾಗಿ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿಯವರು ದಂಪತಿಗಳ ಸ್ಥಿತಿಯನ್ನು ಅವಲೋಕಿಸಿ, ಚಿಕಿತ್ಸೆಗಾಗಿ ತಕ್ಷಣ 8.50 ಲಕ್ಷ ರೂ ಹಣವನ್ನು ನೀಡಿದ್ದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿಯವರು ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ರಾಜಶೇಖರಯ್ಯ ಹಿರೇಮಠ ಅವರು ದಂಪತಿ ಸಮೇತ ಆಗಮಿಸಿ, ಅವರನ್ನು ಭೇಟಿ ಮಾಡಿ ತಮ್ಮ ಮಗ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿ, ಕೃತಜ್ಞತೆಯನ್ನು ಅರ್ಪಿಸಿದರು.