ಶ್ರೀ ಕರಿಯಮ್ಮದೇವಿ ಮಹಾರಥೋತ್ಸವ ಸಂಪನ್ನ

0
ratha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಕರಿಯಮ್ಮದೇವಿಯ 95ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏ.9ರಂದು ಮಹಾರಥೋತ್ಸವವು ಸಕಲ ಮಂಗಳ ವಾದ್ಯಗಳೊಂದಿಗೆ ಶ್ರೀ ಕರಿಯಮ್ಮದೇವಿಯ ಪಲ್ಲಕ್ಕಿ ಉತ್ಸವ, ಸಾವಿರಾರು ಸುಮಂಗಲೆಯರಿಂದ ಕುಂಭ ಮೇಳ ಹಾಗೂ ಶ್ರೀ ಚಕ್ರ ಮಹಿಳಾ ಕಲಾತಂಡದವರಿಂದ ಡೊಳ್ಳು ಕುಣಿತ ಹಾಗೂ ಗೊಂಬೆ ಕುಣಿತಗಳೊಂದಿಗೆ ಅದ್ದೂರಿಯಾಗಿ ಜರುಗಿತು.

Advertisement

ಈ ಸಂದರ್ಭದಲ್ಲಿ ಹರಗುರುಚರ ಮೂರ್ತಿಗಳು ಸೇರಿದಂತೆ, ಶ್ರೀ ಕರಿಯಮ್ಮದೇವಿ ಬಡಾವಣಾ ಸುಧಾರಣಾ ಸಮಿತಿಯ ಅಧ್ಯಕ್ಷ ಸಿ.ಕೆ. ಮಾಳಶೆಟ್ಟಿ, ಜಾತ್ರಾ ಸಮಿತಿಯ ಅಧ್ಯಕ್ಷ ಜಗದೀಶ ಪೂಜಾರ, ನಗರಸಭೆ ಸದಸ್ಯರಾದ ವಿಜಯಲಕ್ಷ್ಮಿ ಶಶಿಧರ ದಿಂಡೂರ, ಗಣ್ಯ ವ್ಯಾಪಾರಸ್ಥರಾದ ಶಂಕರ ಹಾನಗಲ್ಲ ದಂಪತಿಗಳು, ಸಮಿತಿಯ ಸದಸ್ಯರಾದ ಎಸ್.ಬಿ. ಹಡಗಲಿ, ಎಸ್.ಬಿ. ಕಣವಿ, ಎಂ.ಡಿ. ದೇಸಾಯಿಗೌಡ್ರ, ಪಿ.ಎಸ್. ಕುರಹಟ್ಟಿ, ಬಸವರಾಜ ನರೇಗಲ್ಲ, ಜೆ.ಕೆ. ತಮ್ಮಣ್ಣವರ, ವಾಯ್.ಕೆ. ಪಿಡಗಣ್ಣವರ, ಪಿ.ಬಿ. ಹಿರೇಮಠ, ಹೆಚ್.ಬಿ. ಶಿರಗುಂಪಿ, ಎಸ್.ಎ. ಹೊಳೆಯಣ್ಣವರ, ಆರ್.ಬಿ. ಕುಲಕರ್ಣಿ, ಗುರಣ್ಣ ಕಲಕೇರಿ, ಮಹಾಂತೇಶ ಬೆಳಗಲಿ, ಮುತ್ತು ಮಾಲಗಿತ್ತಿ, ಕಿರಣ ಆರಟ್ಟಿ, ಬಸವರಾಜ ಅಣ್ಣಿಗೇರಿ, ಆನಂದ ಕಂಪ್ಲಿ, ಹಿರಿಯ ಮುಖಂಡರಾದ ಶಶಿಧರ ದಿಂಡೂರ, ರಾಜು ಪರಮಣ್ಣವರ, ಸುನೀಲ ಕುಂದಗೋಳ ಸೇರಿದಂತೆ ಶ್ರೀ ಕರಿಯಮ್ಮದೇವಿ ದೇವಸ್ಥಾನ ಸುಧಾರಣಾ ಸಮಿತಿಯ ಸರ್ವ ಸದಸ್ಯರು, ಜಾತ್ರಾ ಕಮಿಟಿಯ ಸರ್ವ ಸದಸ್ಯರು, ಹಿರಿಯರು, ಮುಖಂಡರು ಹಾಗೂ ಗದಗ-ಬೆಟಗೇರಿ ನಗರದ ಶ್ರೀ ಕರಿಯಮ್ಮದೇವಿಯ ಸದ್ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.


Spread the love

LEAVE A REPLY

Please enter your comment!
Please enter your name here