ಏಪ್ರಿಲ್ 12ರಿಂದ ನಾಮಪತ್ರ ಸಲ್ಲಿಕೆ : ವೈಶಾಲಿ ಎಂ.ಎಲ್

0
namapatra
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆ ದಿಸೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 12ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಸಂಬಂಧಪಟ್ಟ ಚುನಾವಣಾಧಿಕಾರಿಗಳಾದ 10-ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಹಾವೇರಿ ಹಾಗೂ 3-ಬಾಗಲಕೋಟ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಬಾಗಲಕೋಟ ಇವರು ತಮ್ಮ ಕಾರ್ಯಾಲಯದಲ್ಲಿ ನಾಮಪತ್ರ ಸ್ವೀಕರಿಸುವರು.

Advertisement

ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದೆ. ಏಪ್ರಿಲ್ 20ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏಪ್ರಿಲ್ 22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದ್ದಾರೆ.

22.1.2024ರಂದು ಪ್ರಕಟಗೊಂಡ ಅಂತಿಮ ಮತದಾರ ಪಟ್ಟಿಯ ನಂತರ ಈವರೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗದಗ ಜಿಲ್ಲೆಯಲ್ಲಿ 888816 ಮತದಾರರು ಇದ್ದು, ಇವರಲ್ಲಿ 443291 ಪುರುಷ ಮತದಾರರು ಮತ್ತು 445464 ಮಹಿಳಾ ಮತದಾರರು ಇದ್ದಾರೆ. 61 ಮಂದಿ ಇತರೆ ಮತದಾರರು ಇದ್ದಾರೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 229462 ಮತದಾರರು ಇದ್ದು, ಇವರಲ್ಲಿ 114919 ಪುರುಷ ಮತದಾರರು ಮತ್ತು 114530 ಮಹಿಳಾ ಮತದಾರರು, ಇತರೆ 13 ಮಂದಿ ಮತದಾರರು ಇದ್ದಾರೆ.
66-ಗದಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 229081 ಮತದಾರರು ಇದ್ದು, ಇವರಲ್ಲಿ 112988 ಪುರುಷ ಮತದಾರರು, 116075 ಮಹಿಳಾ ಮತದಾರರು, 18 ಮಂದಿ ಇತರೆ ಮತದಾರರು ಇದ್ದಾರೆ.

67-ರೋಣ ವಿಧಾನಸಭಾ ಕ್ಷೇತ್ರದಲ್ಲಿ 238569 ಮತದಾರರು ಇದ್ದು, ಇವರಲ್ಲಿ 118782 ಪುರುಷ ಮತದಾದರರು ಮತ್ತು 1,19,764 ಮಹಿಳಾ ಮತದಾರರು ಸೇರಿದಂತೆ 23 ಮಂದಿ ಇತರೆ ಮತದಾರರು ಇದ್ದಾರೆ. ಈ ವಿಧಾನಸಭಾ ಕ್ಷೇತ್ರಗಳು ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ 68-ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 191704 ಮತದಾರರು ಇದ್ದು, ಇವರಲ್ಲಿ 96602 ಪುರುಷ ಮತದಾರರು ಮತ್ತು 95095 ಮಹಿಳಾ ಮತದಾರರು ಸೇರಿದಂತೆ 7 ಇತರೆ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ 1525 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 1,486 ಪುರುಷ ಮತದಾರರು ಹಾಗೂ 39 ಮಹಿಳಾ ಮತದಾರರು ಸೇರಿದ್ದಾರೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 179 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 173 ಪುರುಷ ಮತದಾರರು, 6 ಮಹಿಳಾ ಮತದಾರರು ಇದ್ದಾರೆ. ಗದಗ ವಿಭಾನಸಭಾ ಕ್ಷೇತ್ರದಲ್ಲಿ 222 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 217 ಪುರುಷ ಮತದಾರರು, 5 ಮಂದಿ ಮಹಿಳಾ ಸೇವಾ ಮತದಾರರು ಇದ್ದಾರೆ.

ರೋಣ ವಿಧಾನಸಭಾ ಕ್ಷೇತ್ರದಲ್ಲಿ 478 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 467 ಪುರುಷ ಮತದಾರರು ಹಾಗೂ 11 ಮಹಿಳಾ ಮತದಾರರು ಇದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 646 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 629 ಪುರುಷ ಮತದಾರರು, 17 ಮಹಿಳಾ ಮತದಾರರು ಇದ್ದಾರೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ 26,173 ಯುವ ಮತದಾರರು ಇದ್ದು, 13,698 ಪುರುಷ ಯುವ ಮತದಾರರು ಮತ್ತು 12,474 ಯುವ ಮಹಿಳಾ ಹಾಗೂ 1 ಇತರೆ ಮತದಾರರು ಇದ್ದಾರೆ.

ಗದಗ ಜಿಲ್ಲೆಯಲ್ಲಿ 11983 ವಿಶೇಷ ಚೇತನ ಮತದಾರರು ಇದ್ದಾರೆ. 85 ವರ್ಷ ವಯೋಮಿತಿ ಮೀರಿದ ಹಿರಿಯ ನಾಗರೀಕರು 5749 ಜನ ಇದ್ದಾರೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಮಾಹಿತ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here