ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಪಟ್ಟಣದ ೩ನೇ ವಾರ್ಡ್ ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ, ಪ್ರಭಾರಿ ಮುಖ್ಯಶಿಕ್ಷಕಿ ವಿದ್ಯಾವತಿ ಅವರನ್ನು ಅಮಾನತುಗೊಳಿಸಿ ಬಳ್ಳಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರಿ ಹಾಗೂ ಉಪನಿರ್ದೇಶಕ ಸಿ.ರಾಮಪ್ಪ ಆದೇಶ ಹೊರಡಿಸಿದ್ದಾರೆ.
ಶಾಲೆಯ ಸಹ ಶಿಕ್ಷಕಿ ವಿದ್ಯಾವತಿ ಕಳೆದ ವರ್ಷದಿಂದ ಸರಿಯಾಗಿ ಶಾಲೆಗೆ ಬಾರದೇ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅಮಾನತುಗೊಂಡಿದ್ದಾರೆ.
ಕರ್ತವ್ಯ ಲೋಪ ಕುರಿತು ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ನೀಡಿದ ದೂರನ್ನು ಅವಲೋಕಿಸಿ ಶಿಕ್ಷಣ ಸಂಯೋಜಕ ಟಿ.ಕೆ. ವೆಂಕಟೇಶ ರೆಡ್ಡಿ, ಸಿಆರ್‌ಪಿ ಜೆ.ಕೆ. ಮಂಜಪ್ಪ ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕಿಯ ಕರ್ತವ್ಯ ಲೋಪ ಕಂಡು ಬಂದಿರುವುದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಕೊನೆಗೆ ಸಹ ಶಿಕ್ಷಕಿ ವಿದ್ಯಾವತಿ ಅವರನ್ನು ಅಮಾನತುಗೊಳಿಸಲಾಗಿದೆ. ಶಾಲೆಯ ಪ್ರಭಾರವನ್ನು ಮುಂದಿನ ಆದೇಶದವರೆಗೆ ಸಿ.ಆರ್.ಪಿ. ಜೆ.ಕೆ.ಮಂಜಪ್ಪ ಅವರಿಗೆ ನೀಡಲಾಗಿದೆ.
Trending Now



