ವಿಜಯಸಾಕ್ಷಿ ಸುದ್ದಿ, ಗದಗ : ಈ ದೇಶದ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಪಾತ್ರ ಇದೆ. ದೇಶ ಬಲಿಷ್ಠವಾಗಬೇಕಾದರೆ ನಿಮ್ಮ ಮತ ವ್ಯರ್ಥವಾಗಬಾರದು. 400ಕ್ಕೂ ಹೆಚ್ಚು ಸ್ಥಾನಗಳಿಂದ ಮೋದಿ ಸರಕಾರವನ್ನು ಆಯ್ಕೆ ಮಾಡಿ ಬೆಂಬಲಿಸಿ ಎಂದು ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಮನವಿ ಮಾಡಿದರು.
ಅವರು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
ದೇಶದ ಉಜ್ಚಲ ಭವಿಷ್ಯಕ್ಕಾಗಿ, ಭದ್ರತೆಗಾಗಿ, ಭಾತರವನ್ನು ಮತ್ತೊಮ್ಮೆ ಇಡೀ ವಿಶ್ವ ಬೆರಗಾಗಿ ನೋಡುವಂತೆ ಅಭಿವೃದ್ಧಿಪಡಿಸಲು ನರೇಂದ್ರ ಮೋದಿ ಆವರಿಗೆ ಮತ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.



