ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಎಸ್.ವ್ಹಿ. ಸಂಕನೂರ

0
protest
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಹುಬ್ಬಳ್ಳಿ ನಗರದ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡುಹಗಲೇ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತನಿಖೆ ಕೈಗೊಂಡು ತಪ್ಪಿತಸ್ಥನಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಬದಲು ವ್ಯಕ್ತಿಗತ ಕಾರಣಗಳಿಂದ ಈ ಕೃತ್ಯ ಜರುಗಿದೆ, ಆರೋಪಿ ಅಮಾಯಕ ಎಂಬಂತೆ ಸಚಿವರೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ತನಿಖೆ ಕೈಗೊಳ್ಳುವ ಅಧಿಕಾರಿಗಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಪರಿಜ್ಞಾನವಿಲ್ಲದ ಗೃಹಮಂತ್ರಿಗಳ ಹೇಳಿಕೆ ಖಂಡನೀಯವಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರಕಾರ ಅಸಮರ್ಥವಾಗಿದೆ ಎಂದು ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಆರೋಪಿಸಿದರು.

Advertisement

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ನ್ಯಾಯಪರ ತನಿಖೆಯನ್ನು ಚುರುಕುಗೊಳಿಸಿ, ತಪ್ಪಿತಸ್ಥ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಕಳೆದ 8-10 ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ 8ಕ್ಕೂ ಹೆಚ್ಚು ಸರಣಿ ಹತ್ಯೆಗಳು ನಡೆದಿದ್ದು, ರಾಜ್ಯದ ಜನರನ್ನು ಆತಂಕಕ್ಕೀಡುಮಾಡಿದೆ. ಇದರಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿರುವದು ಕಂಡುಬರುತ್ತದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅನಿಲ ಮೆಣಸಿನಕಾಯಿ, ಬಸವರಾಜ ಇಟಗಿ, ಎಂ.ಎಂ. ಹಿರೇಮಠ, ರಾಜು ಕುಲಕರ್ಣಿ, ಎಂ.ಎಸ್. ಕರಿಗೌಡರ, ಅನಿಲ ಅಬ್ಬಿಗೇರಿ, ಜಗನ್ನಾಥಸಾ ಭಾಂಡಗೆ, ಸುರೇಶ ಚಿತ್ತರಗಿ, ಭದ್ರೇಶ ಕುಸ್ಲಾಪೂರ, ಬಾಬು ಸುಂಕದ, ದ್ಯಾಮಣ್ಣ ನೀಲಗುಂದ, ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ, ವೀರಣ್ಣ ಅಂಗಡಿ, ಸಂತೋಷ ಅಕ್ಕಿ, ಪುನಿತ್ ಬೆನಕನವಾರಿ, ರವಿ ನೆರೆಗಲ್, ರವಿ ದಂಡಿನ, ರಾಜೇಂದ್ರಪ್ರಸಾದ ಹೊನ್ನಗಲ್, ಕೆ.ಪಿ. ಕೋಟಿಗೌಡರ, ಡಿ.ಬಿ. ಕರಿಗೌಡ್ರ, ಅಶೋಕ ಕರೂರ, ರಾಘವೇಂದ್ರ ಯಳವತ್ತಿ, ಮಂಜುನಾಥ ಶಾಂತಗೇರಿ, ನಿಂಗಪ್ಪ ಹುಗ್ಗಿ, ವಂದನಾ ವರ್ಣೇಕರ್, ಶಶಿಧರ ದಿಂಡೂರ, ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ, ರೆಖಾ ಬಂಗಾರಶೆಟ್ಟರ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ಉಷಾ ದಾಸರ, ಪದ್ಮಾ ಮುತ್ತಲದಿನ್ನಿ, ರವಿ ವಗ್ಗನವರ, ರಮೇಶ ಸಜ್ಜಗಾರ, ಅಮರನಾಥ ಬೆಟಗೇರಿ, ಅಶ್ವಿನಿ ಅಂಕಲಕೋಟಿ, ಪವಿತ್ರಾ ಕಲ್ಕುಟರ, ಜ್ಯೋತಿ ಪಾಯಪ್ಪಗೌಡ್ರ, ಪಾರ್ವತಿ ಪಟ್ಟಣಶೆಟ್ಟಿ, ಕಮಲಾಕ್ಷಿ ಗೊಂದಿ, ವಿದ್ಯಾವತಿ ಗಡಗಿ, ಪಾರ್ವತಿ ಪಟ್ಟಣಶೆಟ್ಟಿ, ರತ್ನಾ ಕುರಗೊಡ, ಸುಧೀರ ಕಾಟಿಗಾರ, ವಿನಾಯಕ ಹಬೀಬ, ನಾಗರಾಜ ತಳವಾರ, ವಿನೋದ ಹೌಸನೂರು ಮುಂತಾದವರು ಇದ್ದರು.

ಅಲ್ಪಸಂಖ್ಯಾತರ ತುಷ್ಟೀಕರಣ, ಹಿಂದೂಗಳ ಮೇಲಿನ ದ್ವೇಷದ ರಾಜಕಾರಣ, ಅಮಾಯಕ ಹಿಂದೂ ಹೆಣ್ಣುಮಕ್ಕಳ ಕಗ್ಗೊಲೆ, ಜೈ ಶ್ರೀರಾಮ್ ಎಂದು ಕೂಗಿದವರ ಮೇಲೆ ಹಲ್ಲೆ, ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಪುರಸ್ಕಾರ ಹೀಗೆ ಮತೀಯ ಭಾವನೆಯಿಂದ ಸರ್ಕಾರವನ್ನು ನಡೆಸುತ್ತಿರುವದು ಖಂಡನೀಯ ಎಂದು ರಾಜು ಕುರುಡಗಿ ಆಕ್ರೋಶ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here