ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿಗ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರ ಪರವಾಗಿ ದೀಪಾ ಆನಂದ ಗಡ್ಡದೇವರಮಠ ಪ್ರಚಾರ ಕೈಗೊಂಡರು.
ಶಿಗ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡು, ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡಗಳನ್ನು ವಿತರಿಸಿ ಮಾತನಾಡಿ, ಕಾಂಗ್ರೆಸ್ ಕೇವಲ ಆಶ್ವಾಸನೆ ನೀಡುವದಿಲ್ಲ ಎನ್ನುವದನ್ನು ರಾಜ್ಯ ಸರಕಾರದ ಆಡಳಿತದಲ್ಲಿ ಜನರು ಅರಿತುಕೊಂಡಿದ್ದಾರೆ. ಇದೀಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ನೀಡಿರುವ ಗ್ಯಾರಂಟಿಗಳನ್ನು ಈಡೇರಿಸಲು ಬದ್ಧವಾಗಿದೆ ಎಂದರು.
ಪ್ರಚಾರ ಸಂಯೋಜಕ ರಾಜು ಓಲೇಕಾರ ಮಾತನಾಡಿದರು. ಯಲ್ಲಪ್ಪ ತಳವಾರ, ರಾಮಣ್ಣ ಲಮಾಣಿ, ರಾಜಣ್ಣ ಹೂಲಗೂರ, ಶಿವಣ್ಣ ಕುರಿ, sಸಿದ್ದು ಪೂಜಾರ, ಅಪ್ಪಣ್ಣ ನೂಲ್ವಿ, ಈಸಣ್ಣ ಹೂಲಗೂರ, ರಾಜು ಓಲೇಕಾರ, ಸುರೇಶ ಸ್ವಾದಿ, ರಾಮಣ್ಣ ಕಲಕೋಟಿ, ರಫೀಕ ಕಲಬುರ್ಗಿ, ರಾಜು ನದಾಫ, ನಾಗರಾಜ ಅಜ್ಜಪ್ಪಶೆಟ್ಟರ, ವಿಶ್ವಾ ದೊಡ್ಡಮನಿ, ನಾರಾಯಣ ಬೆಟಗೇರಿ, ಅನಿಲ್ ಬಿದರಳ್ಳಿ, ಕಲ್ಲನಗೌಡ್ರ, ಮಂಜು ಯಲವಿಗಿ, ಗೊಂದಕರ, ಪೂಜಾರ, ದುಂಡವ್ವ ಹಾದಿಮನಿ, ಭಾಗ್ಯಶ್ರೀ ಲಮಾಣಿ ಪಾತಿಮಾ ನಧಾಪ, ಶಭೀನಾ ನಧಾಪ, ಲಕ್ಷ್ಮಿ ಮೂರ್ಕಂಡಿ, ಗುರುಬಸಣ್ಣವರ, ರೇಣುಕಾ ಅತಡಕರ, ಲಕ್ಷ್ಮಿ ಗವಳೆರ, ಶಮಶಾದಬೀ ತಂಬಾಕದ ಸೇರಿದಂತೆ ಕಾರ್ಯಕರ್ತರು ಇದ್ದರು.