ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಚುನಾವಣಾ ಕರ್ತವ್ಯದ ಆದೇಶ ಬಂದಿರುವ ಸಿಬ್ಬಂದಿಗಳಿಗೆ ಇ.ಡಿ.ಸಿ ಹಾಗೂ ಪೋಸ್ಟಲ್ ಬ್ಯಾಲೆಟ್ ನೀಡಲು ಗದಗ ಜಲ್ಲಾಡಳಿತ ಭವನದಲ್ಲಿ ಶನಿವಾರ ತೆರೆದ ಕೇಂದ್ರಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಭೇಟಿ ನೀಡಿದರು.
Advertisement
ಚುನಾವಣಾ ಸಿಬ್ಬಂದಿಗಳ ಇ.ಡಿ.ಸಿ ಮತ್ತು ಪೋಸ್ಟಲ್ ಬ್ಯಾಲೆಟ್ ಕುರಿತ ಉದ್ಭವವಾದ ಸಮಸ್ಯೆಗಳನ್ನು ಪರಿಹರಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರನ್ನು ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಎಲ್.ಗುಂಜೀಕರ ಅಭಿನಂಧಿಸಿದರು. ಈ ಸಂದರ್ಭಧಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಕೆ.ಬಿ. ಕೊಣ್ಣುರ, ಎಸ್.ವಿ. ಕಲ್ಮಠ ಸೇರಿದಂತೆ ಹಲವರಿದ್ದರು.