ಬೇಸಿಗೆ ಶಿಬಿರದ ಮಕ್ಕಳಿಂದ ಹೊರಸಂಚಾರ

0
hora sanchara
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಬೇಸಿಗೆ ಶಿಬಿರದ ಮಕ್ಕಳು ಹಾಗೂ ಶಿಕ್ಷಕರು ಒಂದು ದಿನದ ಹೊರಸಂಚಾರವನ್ನು ಕೈಗೊಂಡರು.

Advertisement

ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಶೈಕ್ಷಣಿಕ ಮಾರ್ಗದರ್ಶಕ ಪ್ರತೀಕ ಎಸ್. ಹುಯಿಲಗೋಳ, ಶಾಲೆಯ ಮುಖ್ಯೋಪಾಧ್ಯಾಯ ಎಂ.ಆರ್. ಡೊಳ್ಳಿನ ಮಕ್ಕಳಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಶಾಲೆಯ ಬೇಸಿಗೆ ಶಿಬಿರದ ಶಿಕ್ಷಕರು/ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಒಂದು ದಿನದ ಹೊರಸಂಚಾರವನ್ನು ಗದಗ ನಗರದ ಹೊರ ವಲಯದಲ್ಲಿರುವ ಸಬರಮತಿ ಆಶ್ರಮ ಹಾಗೂ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಭೇಟಿ ನೀಡಿ, ಮನೋರಂಜನೆ ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಂಡರು.

ಮಕ್ಕಳು ಸಬರಮತಿ ಆಶ್ರಮದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟದ ಹಾದಿ, ವೃತ್ತಿ ಮತ್ತು ಬದುಕು ಮುಂತಾದ ಅಂಶಗಳ ಕುರಿತು ದೂರದರ್ಶನದಲ್ಲಿ ವೀಕ್ಷಿಸಿ, ಗೋಡೆ ಮೇಲೇರುವ ಸಾಕ್ಷ್ಯ ಚಿತ್ರಪಟಗಳನ್ನು ಓದಿ, ಮನನ ಮಾಡಿಕೊಂಡರು.


Spread the love

LEAVE A REPLY

Please enter your comment!
Please enter your name here