HomeDharwadಆಕರ್ಷಿಸುತ್ತಿರುವ ವಿಶೇಷ ಸಖಿ ಮತಗಟ್ಟೆಗಳು

ಆಕರ್ಷಿಸುತ್ತಿರುವ ವಿಶೇಷ ಸಖಿ ಮತಗಟ್ಟೆಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಹಿಳೆಯರು ಮತ್ತು ವಿಕಲಚೇತನರು ದುರ್ಬಲರಲ್ಲ, ಅವರು ಉಳಿದವರಷ್ಟೇ ಸಮರ್ಥರು. ಯಾವ ಕೆಲಸವನ್ನಾದರೂ ಸಂಪೂರ್ಣವಾಗಿ ಮಾಡಬಲ್ಲರು ಎಂಬುದನ್ನು ಸಾರಲು ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೇ ನಡೆಸಲ್ಪಡುವ 35 ಸಖಿ ಮತಗಟ್ಟೆಗಳು, ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಲೇ ನಿಭಾಯಿಸಲ್ಪಡುವ 7 ವಿಕಲಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಅಲಂಕರಿಸಲ್ಪಟಿರುವ ಈ ಮತಗಟ್ಟೆಗಳು ಜನರನ್ನು ಮತದಾನಕ್ಕೆ ಆಕರ್ಷಿಸುತ್ತಿವೆ.

ಆಕರ್ಷಕ ಸ್ವಾಗತ ಕಮಾನು, ರಂಗೋಲಿ, ವರ್ಣಮಯ ಕಾಗದ, ಬಲೂನುಗಳಿಂದ ಮತಗಟ್ಟೆಗಳನ್ನು ಸಿಂಗರಿಸಿದ್ದಾರೆ. ಪಾಲಕರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಕಿಡ್ಸ್ ಕಾರ್ನರ್ ಸ್ಥಾಪಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ವಿತರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಪೇದೆ ಕರ್ತವ್ಯ ನಿರ್ವಹಿಸಲಿದ್ದಾರೆ.

rangoli

ಜಿಲ್ಲೆಯಲ್ಲಿ ಒಟ್ಟು 35 ಸಖಿ ಮತಗಟ್ಟೆಗಳು, 7 ವಿಕಲಚೇತನ ಮತಗಟ್ಟೆಗಳಿವೆ. ಮಹಿಳೆಯರು ಮತ್ತು ವಿಕಲಚೇತನರು ಎಲ್ಲರ ಮುಂದೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶವಾಗಿದೆ.

ವಿಕಲಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆತರಲು ವಾಹನ, ಗಾಲಿಖುರ್ಚಿ, ರ‍್ಯಾಂಪ್, ಭೂತಕನ್ನಡಿ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಕಲಘಟಗಿ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ ಪ್ರಸಿದ್ಧ ತೊಟ್ಟಿಲು ಮಾದರಿಗಳು ಗಮನ ಸೆಳೆಯುತಿವೆ.

ನೆಲ್ಲಿಹರವಿಯ ಸರ್ಕಾರಿ ಲೋವರ್ ಪ್ರೈಮರಿ ಶಾಲೆಯ ಮತಗಟ್ಟೆ ಕೇಂದ್ರ 224ರಲ್ಲಿ ಸಿಬ್ಬಂದಿಗಳು ಲಂಬಾಣಿ ಸಾಂಪ್ರದಾಯಿಕ ಉಡುಪು ಧರಿಸಿರುವುದು ಸಹ ಆಕರ್ಷಣೀಯವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಮತದಾನದಲ್ಲಿ ಪ್ರತಿಯೊಬ್ಬ ಮತದಾರರೂ ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಕಾರ್ಯ ಮಾಡಬೇಕಾಗಿದೆ.

ಅಮರಗೋಳದಲ್ಲಿ ಮಾವಿನ ತಳಿರು-ತೋರಣ, ರಂಗವಲ್ಲಿ, ಬಲೂನು ಸೇರಿ ಬಗೆ ಬಗೆಯ ವಸ್ತುಗಳಿಂದ ವಿಕಲಚೇತನರ ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಹೆಬ್ಬಳ್ಳಿ ಜನತಾ ಪ್ಲಾಟ್‌ನಲ್ಲಿ ಹಾಗೂ ಧಾರವಾಡ ಮರಾಠಾ ಕಾಲೋನಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ ಮತ್ತು ಹುಬ್ಬಳ್ಳಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯ ಮತಗಟ್ಟೆಗಳು ತುಂಬಾ ಆಕರ್ಷಣಿಯವಾಗಿವೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!