HomeGadag Newsಮತದಾನದಲ್ಲಿ ದಾಖಲೆಯ ಶೇ. 14.37 ಏರಿಕೆ

ಮತದಾನದಲ್ಲಿ ದಾಖಲೆಯ ಶೇ. 14.37 ಏರಿಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರೋಣ, ಶಿರಹಟ್ಟಿ ಮತ್ತು ಗದಗ, ಬಾಗಲಕೋಟ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆಗೂ ಮತದಾನ ಪ್ರಮಾಣ ಏರಿಕೆಯಾಗುತ್ತಿರುವುದು ಕಂಡುಬಂದಿದೆ.

ಮೇ ೭ರಂದು ರಾಜ್ಯದಲ್ಲಿ ನಡೆದ 2ನೇ ಹಂತದ ಲೋಕಸಭಾ ಚುನಾವಣೆಗೆ ಗದಗ ಜಿಲ್ಲೆಯಲ್ಲಿ ಶೇ. 73.66ರಷ್ಟು ಮತದಾನ ದಾಖಲಾಗಿದ್ದು, ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಈ ಬಾರಿಯ ಮತದಾನ ದಾಖಲೆಯಾಗಿದೆ.

2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಹಾವೇರಿ ಮತ್ತು ನರಗುಂದ ವಿಧಾನಸಭಾ ಕ್ಷೇತ್ರ ಬಾಗಲಕೋಟ ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿತು. ಅಂದಿನಿಂದಲೂ ಶೇಕಡಾವಾರು ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ, ಮತದಾರರು ಜಾಗೃತರಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿ ಮತದಾನ ಪ್ರಮಾಣ ಶೇ. 59.29ರಷ್ಟಿತ್ತು. ಸದ್ಯ 2024ರ ಮೇ 7ರಂದು ನಡೆದ ಮತದಾನದಲ್ಲಿ ಶೇ. 73.66ರಷ್ಟು ಮತದಾನವಾಗಿ, ಶೇ. 14.37ರಷ್ಟು ಮತದಾನ ಪ್ರಮಾಣ ಏರಿಕೆಯಾಗಿದೆ.

ಸ್ವೀಪ್ ಸಮಿತಿಯ ಮತದಾನ ಜಾಗೃತಿ ಕಾರ್ಯಕ್ರಮದ ಪರಿಣಾಮವಾಗಿ, ಜನರೂ ಎಚ್ಚೆತ್ತುಕೊಂಡಿದ್ದು, ಯುವಕರು ಮತದಾನ ಮಾಡಲು ಮುಂದೆ ಬರುತ್ತಿದ್ದಾರೆ. ಶತಾಯುಷಿಗಳು, ವಿದೇಶಗಳಲ್ಲಿರುವವರೂ ತಮ್ಮ ಊರಿಗೆ ಬಂದು ಮತ ಚಲಾಯಿಸುತ್ತಿದ್ದು, ಇತರರಿಗೂ ಪ್ರೇರಣೆಯಾಗುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಮತದಾನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಭರವಸೆ ಮೂಡಿಸಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ.

ಫಲಪ್ರದವಾದ ಸ್ವೀಪ್ ಚಟುವಟಿಕೆ
ಈ ಬಾರಿ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದಿದ್ದರಿಂದ ಮತದಾನ ಜಾಗೃತಿಗಾಗಿ ಸ್ವೀಪ್ ಸಮಿತಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಯಾವಕಾಶ ಒದಗಿತ್ತು. ಜನರನ್ನು ಜಾಗೃತಗೊಳಿಸಲು ನಾನಾ ರೀತಿಯ ಚಟುವಟಿಕೆಗಳ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ನಮ್ಮ ಪ್ರಯತ್ನಗಳು ಫಲ ನೀಡಿರುವುದು ಖುಷಿ ಮೂಡಿಸಿದೆ.
– ಭರತ್ ಎಸ್.
ಸ್ವೀಪ್ ಸಮಿತಿ ಅಧ್ಯಕ್ಷರು, ಜಿ.ಪಂ ಸಿಇಓ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!