ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಮುಳಗುಂದ ನಾಕಾದಲ್ಲಿನ ಶ್ರೀ ವಿಠ್ಠಲಾರೂಢ ಸಭಾಭವನದಲ್ಲಿ ನಡೆದ ಗದಗ-ಬೆಟಗೇರಿ ಎಸ್.ಎಸ್.ಕೆ. ಸಮಾಜದ ಸಭೆಯಲ್ಲಿ ಹಿಂದುಳಿದ ಸಮುದಾಯದ ಮುಖಂಡ, ಬಿಜೆಪಿ ನಾಯಕ ಹಾಗೂ ಗೊಲ್ಲ (ಯಾದವ) ಸಮಾಜದ ಜಿಲ್ಲಾ ಅಧ್ಯಕ್ಷ ಹರೀಶ ಪೂಜಾರರು, ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಾಬರ್ಚಿ, ಕಾಂಗ್ರೆಸ್ ಪಕ್ಷದ ಮುಖಂಡ ಪ್ರಭು ಬುರಬುರೆ, ಬ್ಲಾಕ್ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಬಿ.ಬಿ. ಅಸೂಟಿ, ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷರಾದ ಫಕೀರಸಾ ಭಾಂಡೆಗೆ, ಬುಡ್ಡಣ್ಣ ಹಬೀಬ್, ವಿನೋದ್ ಸಿದ್ಲಿಂಗ, ಪ್ರಕಾಶ್ ಖೋಡೆ, ವೆಂಕಟೇಶ್ ಪೂಜಾರ್, ಮೋಹನ್ ಪವಾರ್, ಸಮಾಜದ ಹಿರಿಯರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.