ವಿಜಯಸಾಕ್ಷಿ ಸುದ್ದಿ, ಗದಗ : ವಿ.ಪಿ. ಗಾಲಾ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲ ಅಮರಯ್ಯ ಚಿನ್ನಯ್ಯನಮಠ ಮಾತನಾಡಿ, ಪ್ರಪಂಚದಾದ್ಯಂತ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ.
ದಾದಿಯರ ಮಾನವೀಯತೆಯ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕೊರೊನಾ ವೈರಸ್ ಇಲ್ಲದ ಕಾಲದಲ್ಲೂ ದಾದಿಯರ ಕಾಯಕ ಪ್ರೀತಿ ಕಡಿಮೆಯೇನೂ ಇರಲಿಲ್ಲ. ತಾಯಿ ತನ್ನ ಮಗುವನ್ನು ಹೇಗೆ ರಕ್ಷಿಸುವುದಕ್ಕೆ ಪರಿತಪಿಸುತ್ತಾಳೋ ಅದೇ ರೀತಿ ದಾದಿಯರು ತಮ್ಮ ರೋಗಿಗಳ ಆರೈಕೆಯಲ್ಲಿ ಯಾವುದೇ ಹಿಂಜರಿಕೆ ತೋರಿಸುವುದಿಲ್ಲ. ಹೀಗಾಗಿಯೇ ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ಸ್ಥಾನವನ್ನೇ ನೀಡಲಾಗುತ್ತದೆ ಎಂದರು.
ಫ್ಲಾರೆನ್ಸ್ ನೈಟಿಂಗೇಲ್ `ಲೇಡಿ ವಿತ್ ದಿ ಲ್ಯಾಂಪ್’ ಎಂದೇ ಪ್ರಖ್ಯಾತರಾದ ಮಹಿಳೆ. ತಮ್ಮ 17ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. ಇವರ ನೆನಪಿಗಾಗಿ ಲಂಡನ್‌ನ ವಾಟರ್‌ಲೂ ಅರಮನೆಯಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಅವರ ಜನ್ಮದಿನದ ಪ್ರಯುಕ್ತ ದಾದಿಯರ ದಿನ ಆಚರಿಸುತ್ತೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷೆ ರಚನಾ ಗಾಲಾ, ಸೆಕ್ರೆಟರಿ ಪಂಕಜ್ ಗಾಲಾ, ನಿರ್ದೇಶಕ ಗುಂಜನ ಗಾಲಾ, ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.