ಇಬ್ರಾಹಿಂ ಸಾಹೇಬರ ಸೇವೆ ಅವಿಸ್ಮರಣೀಯ

0
late. H. Ibrahim Saheb
Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಮ್ಮ ತನು-ಮನ-ಧನ ತ್ಯಾಗ ಮಾಡಿ ಕರ್ನಾಟಕ ರಾಜ್ಯಾದ್ಯಂತ ನದಾಫ ಪಿಂಜಾರ ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಸಂಪರ್ಕಿಸಿ ಸಂಘಟನೆ ಮಾಡಿ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘವನ್ನು ಸ್ಥಾಪಿಸಿ, ಏಳ್ಗೆಗಾಗಿ ಶ್ರಮಿಸಿದ ದಿ. ಹೆಚ್. ಇಬ್ರಾಹಿಂ ಸಾಹೇಬರ ಸೇವೆ ಅವಿಸ್ಮರಣೀಯ ಎಂದು ಹೆಚ್.ಆರ್. ನದಾಫ ಅಭಿಪ್ರಾಯಪಟ್ಟರು.

Advertisement

ಅವರು ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಗದಗ ಜಿಲ್ಲಾ, ಗದಗ-ಬೆಟಗೇರಿ ಶಹರ ಹಾಗೂ ಗದಗ ತಾಲೂಕಾ ಗ್ರಾಮೀಣ ಘಟಕದ ಸಂಯುಕ್ತ ಆಶ್ರಯದಲ್ಲಿ ನದಾಫ ಪಿಂಜಾರ ಸಮುದಾಯದ ಅಲ್ ಹಜ್ ಡಾ. ಹೆಚ್. ಇಬ್ರಾಹಿಂ ಸಾಹೇಬರ 93ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗದಗ ಶಹರ ಘಟಕದ ಅಧ್ಯಕ್ಷ ಮೈನುದ್ದಿನ ಬಿಜಾಪುರ, ಶಿರಹಟ್ಟಿ ತಾಲೂಕಾಧ್ಯಕ್ಷ ದಾವಲಸಾಬ ನದಾಫ, ರಾಜ್ಯ ಸಮಿತಿ ಸದಸ್ಯ ಎಂ.ಎಂ. ಗಾಡಗೋಳಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಫ್. ಹಳ್ಯಾಳ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಬಿ. ನದಾಫ ವಕೀಲರು ಕುರಾನ್ ಪಠಣ ಮಾಡುವುದರ ಮೂಲಕ ಪ್ರಾರ್ಥಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳಾದ ಎಂ.ಬಿ. ನದಾಫ, ಶೌಕತ್ ಅಲಿ ಎಂ.ಅಣ್ಣಿಗೇರಿ, ಹುಸೇನಸಾಬ ಮೌಲಾಸಾಬ ನದಾಫ, ಇಮಾಮಸಾಬ ನಬಿಸಾಬ ಹುಬ್ಬಳ್ಳಿ, ಹೆಚ್.ಆರ್. ನದಾಫ, ಎಂ.ಎಂ. ಗಾಡಗೋಳಿ, ತಾಜಬಿ ನದಾಫ, ರೇಷ್ಮಾ ಗುಜಮಾಗಡಿ, ಮೈನುದ್ದಿನ್ ಬಿಜಾಪುರ, ಜಾಕೀರ ಬಾಗಲಕೋಟ, ಮೋದಿನಸಾಬ ಅಣ್ಣಿಗೇರಿ, ನಾಸಿರ್ ಚಿಕೇನಕೊಪ್ಪ, ಫರಾಜ ಹುಬ್ಬಳ್ಳಿ, ಹಾಜಿ ರಮಜಾನಸಾಬ ಅಣ್ಣಿಗೇರಿ, ಅಪ್ಪಾಸಾಬ ನದಾಫ, ಡಿ.ಸಿ. ನದಾಫ, ದಾವಲಸಾಬ ನದಾಫ, ರಮಜಾನಸಾಬ ನದಾಫ, ಅಲ್ಲಿಸಾಬ ನದಾಫ, ಅಕ್ಬರಸಾಬ ನದಾಫ, ರಫಿಕ ಮೂಲಿಮನಿ, ರಮಜಾನಸಾಬ ಯಾವಗಲ್ಲ, ಟಿಪುಸಾಬ ನದಾಫ, ಅಬ್ದಲಖಾದರ ಹುಬ್ಬಳ್ಳಿ, ಹಜರೆಸಾಬ ನದಾಫಗಲ್ಲಿ ಬೆಟಗೇರಿ, ಸಯ್ಯದ್ ಮತ್ತು ಸಮಾಜ ಬಾಂಧವರು ಭಾಗವಹಿಸಿದ್ದರು.

ಡಾ. ವಾಯ್.ಆರ್. ಬೇಲೆರಿ ಮಾತನಾಡಿ, ಸಮುದಾಯ ಅಭಿವೃದ್ಧಿಗೊಳ್ಳಲು ಸಂಘಗಳ ಸ್ಥಾಪನೆ ಬಹಳ ಮುಖ್ಯ. ಹಾಗಾಗಿ ಸ್ಥಾಪನೆಗೊಂಡ ಸಂಘದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಮೂಲಕ ಮುಂದುವರೆಯಬೇಕು ಎಂದರು.


Spread the love

LEAVE A REPLY

Please enter your comment!
Please enter your name here