ವಿಜಯಸಾಕ್ಷಿ ಸುದ್ದಿ, ಗದಗ : ಜೆಡಿಎಸ್ ಪಕ್ಷದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಚ್.ಡಿ. ರೇವಣ್ಣ ಅವರು ಯಾವುದೇ ತಪ್ಪು ಮಾಡದೇ ಇದ್ದರೂ ಅವರಿಗೆ ರಾಜಕೀಯ ಪ್ರೇರಿತ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ, ಐದು ದಿನಗಳಿಂದ ಜೈಲಿನಲ್ಲಿ ಇಟ್ಟಿರುವುದು ಕರ್ನಾಟಕದ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವ ವಿಷಯವಲ್ಲ ಎಂದು ಗದಗ ಜಿಲ್ಲಾ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಹೆಚ್ ಕೊಪ್ಪಳ ಹೇಳಿದ್ದಾರೆ.
Advertisement
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾನೂನು ಹೋರಾಟ ನಡೆಸಿ ಸಮಗ್ರವಾದ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ಅಪಹರಣ ಪ್ರಕರಣ ಸುಳ್ಳು ಎಂದು ಸಂತ್ರಸ್ಥ ಮಹಿಳೆಯ ಹೇಳಿಕೆ ಹಾಗೂ ಎಲ್ಲಾ ದಾಖಲಾತಿಗಳನ್ನು ಆಧರಿಸಿ ನ್ಯಾಯಾಲಯ ರೇವಣ್ಣನವರಿಗೆ ಜಾಮೀನು ನೀಡಿರುವುದು ಸಂತೋಷದ ವಿಷಯವೆಂದು ಹೇಳಿಕೆ ನೀಡಿದ್ದಾರೆ.