ಗದಗ-ಬೆಟಗೇರಿ ಸಾರ್ವಜನಿಕರ ಗಮನಕ್ಕೆ

0
Gadag-Betageri Municipal Standing Committee Chairman Anila Abbigeri
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಮ್ಮಿಗಿ ಡ್ಯಾಮ್‌ನಲ್ಲಿ ನೀರಿನ ಮಟ್ಟ ಬಹಳಷ್ಟು ಕುಸಿದಿದ್ದರಿಂದ ಹಮ್ಮಿಗಿಯಲ್ಲಿ ನೀರಿನ ಸರಬರಾಜು ಮಾಡುವ ಕಾಲುವೆಯನ್ನು ಸ್ವಚ್ಚಗೊಳಿಸಲಾಗುತ್ತಿದೆ. ಕಾರಣ, ಮುಂದಿನ 4-5 ದಿನಗಳ ಕಾಲ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜು ಪ್ರಾರಂಭವಾಗುವವರೆಗೂ ಟ್ಯಾಂಕರ್ ಮೂಲಕ ಪ್ರತಿ ವಾರ್ಡಿಗೆ ನೀರಿನ ಪೂರೈಕೆಯನ್ನು ಗದಗ-ಬೆಟಗೇರಿ ನಗರಸಭೆಯ ವತಿಯಿಂದ ಮಾಡಲಾಗುತ್ತಿದ್ದು, ಗದಗ-ಬೆಟಗೇರಿಯ ಜನತೆ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ-ಬೆಟಗೇರಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here