ಇಪಿಎಫ್‌ಒ ಚಂದಾದಾರರಿಗೆ ದೀಪಾವಳಿ ಬಂಫರ್ ಗಿಫ್ಟ್

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ
ಉದ್ಯೋಗಿಗಳ ಭವಿ? ನಿಧಿ ಸಂಘಟನೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ದೀಪಾವಳಿ ಬಂಫರ್ ಗಿಫ್ಟ್ ಎನ್ನುವಂತೆ, ಶೇ.8.5ರ ಬಡ್ಡಿಯ ಮೊದಲ ಕಂತು ಜಮೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ವ?ಕ್ಕೆ ಶೇ.8.5ಬಡ್ಡಿ ಯನ್ನು ತನ್ನ ಚಂದಾದಾರರಿಗೆ ಪಾವತಿಸುವುದಾಗಿ ಇಪಿಎಫ್ ಒ ಕೇಂದ್ರೀಯ ಮಂಡಳಿ ಸೆಪ್ಟೆಂಬರ್ ನಲ್ಲಿ ತಿಳಿಸಿದೆ.

ದೀಪಾವಳಿವೇಳೆಗೆ ಸರ್ಕಾರ ವಿಧಿಸಿರುವಂತ ಶೇ.8.5ರ ಬಡ್ಡಿಯನ್ನು ವರ್ಗಾಯಿಸಬಹುದು, ಉಳಿದ ಶೇ.0.35ರ? ಹಣವನ್ನು ಡಿಸೆಂಬರ್ ವೇಳೆಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ನಲ್ಲಿ ನಿವೃತ್ತಿ ನಿಧಿ ಸಂಸ್ಥೆಯ ಗಳಿಕೆಯು ತೀವ್ರವಾಗಿ ಹೊಡೆತ ಉಂಟಾಗಿತ್ತು.

ಇಪಿಎಫ್ ಒ ಆಡಳಿತ ಮಂಡಳಿ 2018-19ನೇ ಸಾಲಿಗೆ ಶೇ.8.65ಬಡ್ಡಿ ಯನ್ನು ನಿಗದಿಪಡಿಸಿತ್ತು. ಈ ಹಿಂದೆ 2016-17 ನೇ ಸಾಲಿಗೆ ಶೇ.8.65ಮತ್ತು 2017-18ರಲ್ಲಿ ಶೇ.8.55ರ? ಬಡ್ಡಿ ದರವನ್ನು ಮಂಡಳಿ ನೀಡಿತ್ತು. 2015-16ರಲ್ಲಿ ಬಡ್ಡಿ ದರ ಶೇ.8.8ಕ್ಕೆ ಏರಿಕೆಯಾಗಿತ್ತು. 2013-14,  2014-15ರಲ್ಲಿ ಶೇ.8.74ಬಡ್ಡಿ ದರ ನೀಡಿತ್ತು. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಇಪಿಎಫ್ ಒ94.41  ಲಕ್ಷ ಕ್ಲೇಮುಗಳನ್ನು ಇತ್ಯರ್ಥಪಡಿಸಿದ್ದು, ಸುಮಾರು ? 35445 ಕೋಟಿಯನ್ನು ತನ್ನ ಸದಸ್ಯರಿಗೆ ನೀಡಿದೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಸದಸ್ಯರಿಗೆ ಹಣದ ಅವಶ್ಯಕತೆಗಳನ್ನು ಪೂರೈಸಲು ನೆರವಾಗಲು, ತ್ವರಿತವಾಗಿ ಮುಂಗಡಗಳನ್ನು ಮತ್ತು ಅನಾರೋಗ್ಯಸಂಬಂಧಿತ ಕ್ಲೇಮುಗಳನ್ನು ಹೊಂದಿಸಲು ಪ್ರಯತ್ನಿಸುತ್ತದೆ. ಈ ಎರಡು ವರ್ಗಗಳ ಮುಂಗಡಗಳಿಗೆ ಆಟೊ ಮೋಡ್ ಅನ್ನು ಪರಿಚಯಿಸಿದೆ. ಸ್ವಯಂ ಪರಿಹಾರವು ಕ್ಲೇಮ್ ಸೆಟಲ್ ಮೆಂಟ್ ಆವರ್ತವನ್ನು ಕೇವಲ 3 ದಿನಗಳವರೆಗೆ ಇಳಿಸಿತು,20ದಿನಗಳೊಳಗೆ ಕ್ಲೇಮುಗಳನ್ನು ಇತ್ಯರ್ಥಪಡಿಸಬೇಕಾದ ಕಾನೂನುಬದ್ಧ ಅವಶ್ಯಕತೆಗೆ ವಿರುದ್ಧವಾಗಿ ಈ ಎರಡು ವಿಭಾಗಗಳಲ್ಲಿ ಹೆಚ್ಚಿನ ಕ್ಲೇಮುಗಳಿಗೆ ಕೇವಲ 3 ದಿನಗಳಿಗೆ ಮಾತ್ರ ಸೀಮಿತವಾಯಿತು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.