ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯಲ್ಲಿ ಗಂಗಾಮತ ಸಮಾಜದ ಅಂಜಲಿ ಅಂಬಿಗೇರ ಹತ್ಯೆಯ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಗದಗ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಬಿ.ಎನ್. ಯರನಾಳ, ಹುಬ್ಬಳ್ಳಿಯ ಸಹೋದರಿ ನೇಹಾ ಹಿರೇಮಠ ಹತ್ಯೆಯ ವಿಷಯ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಭೀಕರವಾಗಿ ಹತ್ಯೆಯಾಗಿದ್ದಾಳೆ.
ಅಂಜಲಿಯ ಹತ್ಯೆಯಿಂದ ಇಡೀ ಕುಟುಂಬವೇ ಬೀದಿಗೆ ಬಂದಂತಾಗಿದೆ. ಕಾರಣ, ಕೂಡಲೇ ಹತ್ಯೆಗೈದ ಆರೋಪಿಯನ್ನು ಬಂಧಿಸಿ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಂದತೆ ಆರೋಪಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಅಂಜಲಿ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿ.ಬಿ. ಬಾರಕೇರ, ಆರ್.ಪಿ. ಹುನಗುಂದ, ಮಾರುತಿ, ರಾಮಣ್ಣ ಬಾರಕೇರ, ಗುರು ಎಚ್. ತಿರ್ಲಾಪೂರ, ಯಲ್ಲಪ್ಪ ಎಸ್.ಹುನಗುಂದ, ಕೆ.ಎಸ್. ಬಳಗಾನೂರ, ಯಚ್ಚರಪ್ಪ ಬಾರಕೇರ, ಗುರುಶಾಂತ ಸೂಡಿ, ವಾಸುದೇವ, ಎಸ್.ಎಚ್. ಸುಣಗಾರ, ಅಶೋಕ, ಭಾವನಾ, ವಿಶಾಲಾಲಕ್ಷಿ ಗುಳಬಾಳ, ಪಿ.ಎನ್. ಓಲೆಕಾರ, ನಾಗಪ್ಪ ಸುಣಗಾರ, ವಿ.ಎಸ್. ಬಾರಕೇರ, ಪಿ.ಬಿ. ಬಾರಕೇರ, ಮಾಲತೇಶ ಉಪಸ್ಥಿತರಿದ್ದರು.