ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ : ರಾಣಿ ಚಂದಾವರಿ

0
Murder of Anjali Ambiger of Hubli
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ, ಆರೋಪಿ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ, ಕ್ರಾಂತಿಸೇನಾ ಗದಗ ಜಿಲ್ಲಾ ಮಹಿಳಾ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಕ್ರಾಂತಿಸೇನಾ ಗದಗ ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಣಿ ಚಂದಾವರಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಕೊಲೆಗಡುಕರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಗಡುಕರನ್ನ ಗಲ್ಲಿಗೇರಿಸುವಂತಹ ಕಾನೂನು ಜಾರಿಗೆ ಬರಬೇಕು ಎಂದರು.

ಗೌರವ ಕಾರ್ಯದರ್ಶಿ ರೇಣುಕಾ ಕಬಾಡಿ ಮಾತನಾಡಿ, ರಾಜ್ಯದಲ್ಲಿ ಯುವತಿರ ಮೇಲೆ ನಡೆಯುತ್ತಿರುವ ಇಂತಹ ದೃಷ್ಟ ಕೃತ್ಯಗಳಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಮಹಿಳಾ ಸಂಘಟನೆಯ ಕೌಶಲ್ಯ ಬದಿ, ಮಹಾನಂದ ಪತ್ತಾರ್, ರೇಣುಕಾ ಕಲ್ಬುರ್ಗಿ, ಎಸ್‌ಎಸ್‌ಕೆ ಮಹಿಳಾ ಮಂಡಳದ ಉಮಾ ಬೇವನಕಟ್ಟಿ, ಪೂಜಾ ಬೇವೂರ್, ವಿಜಯಲಕ್ಷ್ಮಿ ಬಿರಾದಾರ್, ಶಿಲ್ಪಾ ಯಲಮಲಿ, ಅರುಣಾ ಗುಂಡಗಟ್ಟಿ, ಶಾಂತಾಬಾಯಿ ಬಾಕಳೆ, ಸ್ನೇಹಲತಾ ಕಬಾಡಿ, ಕ್ರಾಂತಿಸೇನಾ ತಾಲೂಕು ಸಹ ಕಾರ್ಯದರ್ಶಿ ವಿನಾಯಕ ಕಾಟವಾ, ಪಾಂಡು ಬಾಬನಿ, ಆಕಾಶ್ ಜಿಡ್ಡಿಮನಿ, ಅರುಣ್ ಹುಚ್ಚಯ್ಯ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here