ವಿಜಯಸಾಕ್ಷಿ ಸುದ್ದಿ, ನರೇಗಲ್ : ಗದಗ ಜಿಲ್ಲೆಯಲ್ಲಿ ಬಿಸಿಎ ಕೋರ್ಸ್ ಹೊಂದಿರುವ ಏಕೈಕ ಸರ್ಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪದವಿ ಕಾಲೇಜು 2024-25ನೇ ಸಾಲಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನಿಂದ (ಎಐಸಿಟಿಇ) ಮಾನ್ಯತೆ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಾಂಶುಪಾಲ ಈ.ಆರ್. ಲಗಳೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಕೇಲವೇ ಸರ್ಕಾರಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಲಭ್ಯವಿರುತ್ತವೆ. ಜಿಲ್ಲೆಯ ಶಿಕ್ಷಣ ಕಾಶಿ ಎಂದು ಹೆಸರು ಪಡೆದ ನರೇಗಲ್ ಪಟ್ಟಣದಲ್ಲಿ ತಾಂತ್ರಿಕ ಕೋರ್ಸ್ಗೆ ಎಐಸಿಟಿಇ ಮಾನ್ಯತೆ ಸಿಕ್ಕಿರುವುದು ಗ್ರಾಮೀಣ ಭಾಗದ ಬಡ, ಹಿಂದುಳಿದ ಹಾಗೂ ಕೃಷಿಕರ ಮಕ್ಕಳಿಗೆ ತುಂಬಾ ಅನಕೂಲವಾಗಲಿದೆ.
ನಮ್ಮ ಮಹಾವಿದ್ಯಾಲಯವು ಸುಸಜ್ಜಿತ ಕಟ್ಟಡ, ಆಧುನಿಕ ಪ್ರಯೋಗಾಲಯ, ನುರಿತ ಪ್ರಾಧ್ಯಾಪಕರನ್ನು ಹೊಂದಿದ್ದು, ಇಲ್ಲಿಯವರೆಗೆ ಉತ್ತಮ ಫಲಿತಾಂಶ ದಾಖಲಿಸುತ್ತ ಬಂದಿದೆ. ಬಿಸಿಎ ಕೋರ್ಸ್ಗೆ ಪ್ರವೇಶ ಪಡೆಯಲು ಗಜೇಂದ್ರಗಡ, ಗದಗ, ರೋಣ, ಯಲಬುರ್ಗಾ ಭಾಗದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಸದ್ಯ 2024-25ನೇ ಸಾಲಿನ ಪ್ರಥಮ ಸೆಮಿಸ್ಟರ್‌ಗೆ ಪಿಯುಸಿ ವಿಜ್ಞಾನ, ಕಾಮರ್ಸ್ ವಿಭಾಗದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳೊಂದಿಗೆ ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಸಿಎ ಎಚ್‌ಒಡಿ ಜ್ಯೋತಿ ಬಿ-8050020356, ಉಪನ್ಯಾಸಕರಾದ ಚಂದ್ರು ಎಂ.ರಾಥೋಡ್-8050020356, ಬಸವರಾಜ ಮಡಿವಾಳರ-8050020356, ವಿರುಪಾಕ್ಷ ಎಸ್-9740619292 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಎಐಸಿಟಿಇ ಮಾನ್ಯತೆಯಿಂದ ಬಿಸಿಎ ಎಂಬ ಪದವಿ ಕೋರ್ಸ್ ಸಂಪೂರ್ಣವಾಗಿ ತಾಂತ್ರಿಕ ಹಾಗೂ ಕೌಶಲ್ಯ ತರಬೇತಿ ನೀಡುವ ಜಾಬ್ ಓರಿಯೆಂಟೆಡ್ ಕೋರ್ಸ್ ಆಗಿ ಪರಿವರ್ತನೆಗೊಂಡಿದೆ. ನಮ್ಮ ಸರ್ಕಾರಿ ಪದವಿ ಕಲಾ ಕಾಲೇಜಿನಲ್ಲಿ 3ನೇ ಬ್ಯಾಚಿಗೆ ಈಗಾಗಲೇ ಪ್ರವೇಶಗಳು ಆರಂಭವಾಗಿದ್ದು, ಕೇವಲ ಸರ್ಕಾರ ನಿಗದಿ ಮಾಡಿದ ಹಣವನ್ನು ಮಾತ್ರ ತುಂಬುವ ಮೂಲಕ ಅತಿ ಕಡಿಮೆ ಹಣದಲ್ಲಿ ವಿದ್ಯಾರ್ಥಿಗಳು ಬಿಸಿಎ ಪದಿಯನ್ನು ಪಡೆಯಬಹುದಾಗಿದೆ.