Homecultureಉತ್ಸವಗಳು ಸಾಮರಸ್ಯದ ಸಂಕೇತ : ಶ್ರೀ ವಿರೇಶ್ವರ ಗುರುಜಿ ಹಿರೇಮಠ

ಉತ್ಸವಗಳು ಸಾಮರಸ್ಯದ ಸಂಕೇತ : ಶ್ರೀ ವಿರೇಶ್ವರ ಗುರುಜಿ ಹಿರೇಮಠ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ತಾಲೂಕಿನ ನಾಗಸಮುದ್ರ ಗ್ರಾಮದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಹಾಗೂ ಶ್ರೀ ದ್ಯಾಮಮ್ಮ ದೇವಿ ಮತ್ತು ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವಗಳ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ್ರ ಬಣ) ಗದಗ ಜಿಲ್ಲಾ ಘಟಕ ಮತ್ತು ಗ್ರಾಮ ಘಟಕದಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಾಗಸಮುದ್ರೋತ್ಸವ-2024ರ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನ ಶ್ರೀ ಅನ್ನದಾನೀಶ್ವರ ಶಾಖಾಮಠ ನರಸಾಪುರದ ಶ್ರೀ ವಿರೇಶ್ವರ ಗುರುಜಿ ಹಿರೇಮಠ ಅವರ ವಹಿಸಿಕೊಂಡು ಮಾತನಾಡಿ, ನಾಡಿನಲ್ಲಿ ನಡೆಯುವ ಉತ್ಸವ-ಜಾತ್ರೆಗಳು ಮನುಕುಲದ ಸಮಾನತೆಯ ಸಾಮರಸ್ಯದ ಸಂಕೇತವಾಗಿವೆ. ಇವುಗಳನ್ನು ಉಳಿಕೊಂಡು ಹೋಗುವುದು ಇವತ್ತಿನ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ ಎಂದು ಆಶಿರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ವಕೀಲರ ಸಂಘದ ಅಧ್ಯಕ್ಷ ಮಾಲತೇಶ ಹಿರೇಮನಿಪಾಟೀಲ್ ವಕೀಲರು ಮಾತನಾಡಿ, ಸರಕಾರದ ಯಾವುದೇ ಅನುದಾನವನ್ನು, ಪ್ರೋತ್ಸಾಹ ಧನವನ್ನು ಪಡೆಯದೆ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್ ಶಿವರಾಮೇಗೌಡ್ರ ಬಣ) ಕಾರ್ಯಕರ್ತರು ಹಾಗೂ ನಾಗಸಮುದ್ರ ಗ್ರಾಮಸ್ಥರು ಸತತವಾಗಿ ಮೂರು ವರ್ಷಗಳ ಕಾಲ ಈ ಅದ್ದೂರಿ ನಾಗಸಮುದ್ರೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಗದಗ ಜಿಲ್ಲೆಗೆ ಶೋಭೆ ತರುವ ಆದರ್ಶ ಕಾರ್ಯಕ್ರಮವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಪಿ.ಪರ್ವತಗೌಡ್ರ ಮಾತನಾಡಿ, ಗ್ರಾಮದ ಜಾತ್ರಾ ಮಹೋತ್ಸಗಳ ಅಂಗವಾಗಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುವ ನಾಗಸಮುದ್ರೋತ್ಸವ ಕಾರ್ಯಕ್ರಮಕ್ಕೆ ಗ್ರಾಮಸ್ಥರ ನಿಸ್ವಾರ್ಥ ಪರಿಶ್ರಮ, ಸಹಕಾರ ಹಿರಿದಾಗಿದೆ ಎಂದರಲ್ಲದೆ, ಕಾರ್ಯಕ್ರಮಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದವರಿಗೆ ಧನ್ಯವಾದಗಳನ್ನ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಝೀ ಕನ್ನಡ ವಾಹಿನಿಯ ಸರಿಗಮಪ-19ರ ಫೈನಲಿಸ್ಟ್ ರೇವನ ಸಿದ್ದಪ್ಪ, ಸರಿಗಮಪ-20ರ ಸ್ಪರ್ಧಿ ಸುಜಾತಾ ಕಲ್ಮೇಶ ಮತ್ತು ಸ್ಪೂರ್ತಿ ಮೆಲೋಡಿಸ್ ತಂಡದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಅಥಿತಿಗಳಾಗಿ ನಿಂಗಪ್ಪ ಮಣ್ಣೂರ, ಮಲ್ಲಿಕಾರ್ಜುನ ಕಿರೆಸೂರ, ಬಸವರಾಜ ಮೇಟಿ, ನೀಲವ್ವ ಮಣ್ಣೂರ, ಬಸನಗೌಡ ಪಾಟೀಲ್, ಮಲ್ಲನಗೌಡ ಭರಮಗೌಡ್ರ, ಶಾಂತಯ್ಯ ಮುತ್ತಿನಪೆಂಡಿಮಠ, ಫಕೀರಸಾಬ್ ನದಾಫ್, ಎಸ್.ಎಸ್. ಹಳ್ಳಿಕೇರಿ, ಮಲ್ಲನಗೌಡ ಪರ್ವತಗೌಡ್ರ, ವಿರುಪಾಕ್ಷಗೌಡ ಹನಮಂತಗೌಡ್ರ, ವೀರಣ್ಣ ಕೊಳ್ಳಿ, ಹುಚ್ಚುಸಾಬ ಹೊಸಳ್ಳಿ, ಭೀಮಣ್ಣ ಇಟಗಿ, ರಮೇಶ್ ಅಬ್ಬಿಗೇರಿ, ಸುರೇಶ ಮುಳಗುಂದ, ಬಸವರಾಜ ಮುಳ್ಳಾಳ, ಬಸವರಾಜ ಗದಗಿನ, ದೇವಪ್ಪ ಕವಲೂರ, ಬಾಲಪ್ಪ ಪೂಜಾರ ಪಾಲ್ಗೊಂಡಿದ್ದರು.

ಕರವೇ ಕಾರ್ಯಕರ್ತರಾದ ಲಕ್ಷ್ಮಣ ಪೂಜಾರ, ರಮೇಶ್ ಹನಮಂತಗೌಡ್ರ, ಯಲ್ಲಪ್ಪ ಹನಮಂತಗೌಡ್ರ, ಮಂಜುನಾಥ ಮಣ್ಣೂರ, ಸಂತ್ತೋಷ ಕುರವತ್ತಿ, ನಿಂಗರಾಜ ಭರಮಗೌಡ್ರ, ಸಂಜೀವ ಇಟಗಿ, ಶರಣಪ್ಪ ತಡಹಾಳ, ರವಿ ಪರ್ವತಗೌಡ್ರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

ಮುಖ್ಯ ಅಥಿತಿ, ಕೆಪಿಸಿಸಿ ರಾಜ್ಯ ವಕ್ತಾರ ಡಾ. ಸಂಗಮೇಶ ಕೊಳ್ಳಿ ಮಾತನಾಡಿ, ಚಾಲುಕ್ಯರ ನಾಡು ನಾಗಸಮುದ್ರ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಚಾಲುಕ್ಯರು ಸಹ ಈ ಗ್ರಾಮದ ಅಂಜನೇಯ ಮತ್ತು ಈಶ್ವರನಿಗೆ ಪೂಜಿಸುತಿದ್ದರು ಎಂದು ಈ ಭಾಗದ ಹಿರಿಯರು ಹೇಳುತ್ತಾರೆ. ಬ್ರಿಟಿಷರಿಗೆ ತಮ್ಮ ಚಾಣಾಕ್ಷತನದಿಂದ ಚಳ್ಳೆಹಣ್ಣು ತಿನ್ನಿಸಿ ಗ್ರಾಮವನ್ನು ಸಂರಕ್ಷಿಸಿಕೊಂಡ ಈ ಗ್ರಾಮ, ದೇವಾನುದೇವತೆಗಳ ಪುಣ್ಯಕ್ಷೇತ್ರವಾಗಿದೆ. ಗ್ರಾಮದಲ್ಲಿ ಪ್ರತಿವರ್ಷವೂ ಜಾತ್ರಾ ಮಹೋತ್ಸವಗಳ ಅಂಗವಾಗಿ ಕೈಗೊಳ್ಳುವ ನಾಗಸಮುದ್ರೋತ್ಸವ ಕಾರ್ಯಕ್ರಮ ನೋಡಲು ಎರಡು ಕಣ್ಣುಗಳು ಸಾಲದು ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!