ವಿಜಯಸಾಕ್ಷಿ ಸುದ್ದಿ, ಗದಗ : ಬುದ್ಧ ಪೂರ್ಣಿಮೆಯ ನಿಮಿತ್ತ ರಮಾಬಾಯಿ ಅಂಬೇಡ್ಕರ ಮಹಿಳಾ ಭೀಮಶಕ್ತಿ ಸಮಿತಿ ಗದಗ ವತಿಯಿಂದ ಗೌತಮ ಬುದ್ಧ ಪುತ್ತಳಿಗೆ ಪೂಜೆ ಮಾಡುವ ಮೂಲಕ ಬುದ್ಧ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಗೋವಿಂದರಾಜ ಬಳ್ಳಾರಿ ಮಾತನಾಡಿ, ಜಗತ್ತಿನಲ್ಲಿ ಅತಿ ವಿಶಿಷ್ಠ ಮಹಾಪುರುಷ ಭಗವಾನ್ ಬುದ್ಧರ ಜೀವನದಲ್ಲಿ ಹುಟ್ಟು, ಜ್ಞಾನೋದಯ ಹಾಗೂ ಪರಿನಿಬ್ಬಾಣ ಈ ಮೂರು ಐತಿಹಾಸಿಕ ಘಟನೆಗಳು ಸಂಭವಿಸಿವೆ ಎಂದರು.
ಯುವರಾಜ ಬಳ್ಳಾರಿ ಮಾತನಾಡಿ, ಬುದ್ಧ ಪೂರ್ಣಿಯ ಬೆಳಕು ಜಗತ್ತಿನ ಅಜ್ಞಾನದ ಅಂಧಕಾರವನ್ನು ಅಳಿಸಿ ಸುಜ್ಞಾನದ ದೀವಿಗೆಯನ್ನು ಬೆಳಗಲಿ. ಎಲ್ಲರೂ ಬುದ್ಧನ ಆದರ್ಶಗಳನ್ನು ಪಾಲಿಸಲು ತಿಳಿಸಿದರು.
ಈ ಸಂಧರ್ಭದಲ್ಲಿ ದಂಡಕ್ಕ ಯು.ಬಳ್ಳಾರಿ, ನಾಗಮ್ಮಾ ಕಾ.ಬಳ್ಳಾರಿ, ರೇಣುಕಾ ಗೋ.ಬಳ್ಳಾರಿ, ಪದ್ಮಾ ನಾಗರಾಜ ಕಿನ್ನಾರಿ, ನಾಗಮ್ಮ ಮ.ನಾನಬಾಲ, ಹುಲಗವ್ವಾ ರಾ.ಬಳ್ಳಾರಿ, ಲಕ್ಷö್ಮವ್ವಾ ಲಕ್ಷö್ಮಣ ಯಟ್ಟಿ, ಶಾಂತಾ ಬಳ್ಳಾರಿ, ಲಕ್ಷಿö್ಮ ಬಳ್ಳಾರಿ, ದುರ್ಗಾ ಸುಕೇಶ, ಪೂಜಾಶ್ರೀ, ಪವನಕುಮಾರ, ವಿನಾಯಕ, ಸಹಾನ, ಅಂಬಿಕಾ, ರಾಗಿಣಿ, ಐಶ್ವರ್ಯ, ಸಾಯಿಕುಮಾರ ಮುಂತಾದವರಿದ್ದರು.



