ವಿಜಯಸಾಕ್ಷಿ ಸುದ್ದಿ, ಗದಗ : ಬೆಂಗಳೂರಿನ ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ವತಿಯಿಂದ ಸಾಂಕೇತಿಕ ಪ್ರತಿಭಟನಾ ಮೆರವಣಿಗೆ ನಡೆಸಿ, ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಗದಗ ಜಿಲ್ಲಾಧ್ಯಕ್ಷ ಪವನ ಕೆ.ಮೇಹರವಾಡೆ ಮಾತನಾಡಿ, ಬೆಂಗಳೂರಿನಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಛಾಯಾಗ್ರಾಹಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇದರಿಂದಾಗಿ ಛಾಯಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವೃತ್ತಿನಿರತ ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ದೊರೆಯಬೇಕು.
ಹಲ್ಲೆಗೊಳಗಾಗಿರುವ ಛಾಯಾಗ್ರಾಹಕರಿಗೆ ಸರಕಾರ ಪರಿಹಾರವನ್ನು ನೀಡಬೇಕು. ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಭಾರ ಕಾರ್ಯದರ್ಶಿ ಮಹಾದೇವಗೌಡ್ರ ಸಂಕನಗೌಡ್ರ, ಚನ್ನಪ್ಪ ಬ್ಯಾಹಟ್ಟಿ, ರಾಜು ಬಾಕಳೆ, ವಿನಾಯಕ, ಸಂತೋಷ ನಾವಳ್ಳಿ, ಕೊಟ್ರೇಶ ಕುಂದ್ರಳ್ಳಿ, ಕುಮಾರ ನಾಗನೂರು, ಶರಣು ಉಪ್ಪಿನ, ಎಮ್.ಎಸ್. ಸಂಕನಗೌಡ್ರ, ಸಂತೋಷ ಗೋಕಾವಿ, ಮುತ್ತು ಹುಲಕೋಟಿ, ಪ್ರಕಾಶ ವಸ್ತçದ, ರಾಮು ವಗ್ಗಿ, ವಿಶಾಲಾ ವಿಡಿಯೋ, ರಾಮ ಫೋಟೋ, ಪುಟ್ಟರಾಜ ಸ್ಟುಡಿಯೋ, ಕೊಟ್ರೇಶ ಅಕ್ಕಿ, ಪ್ರಜ್ವಲ್ ಸ್ಥಾವರದ, ದೇವ ಪವಾರ, ನಾರಾಯಣಸಾ ಮಿಸ್ಕಿನ್, ಗಣೇಶ ಪವಾರ, ರಾಮಚಂದ್ರಸಾ ಶಿದ್ಲಿಂಗ, ವೈಜನಾಥ ವಿ.ಕೌತಾಳ, ಚೇತನ ಧೂಳಾ, ಶಿವಾನಂದ ಬನಟ್ಟಿ, ಮಾಣಿಕ ಪವಾರ, ರವಿ ಬಳಿಗೇರ, ಡಿ.ಎಂ. ನಲುಡಿ ಉಪಸ್ಥಿತರಿದ್ದರು.
Advertisement