ವಿಜಯಸಾಕ್ಷಿ ಸುದ್ದಿ, ಗದಗ : ಸಮಿಪದ ಹಾತಲಗೇರಿ ಗ್ರಾಮದ ಶ್ರೀ ಬೇವಿನ ಮರದ ಸತ್ಯಮ್ಮ ದೇವಿ ಜಾತ್ರಾಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Advertisement
ಮಹಾ ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಪಾದಗಟಿವರಗೆ ಸಾಗಿತು. ರಥೋತ್ಸವದಲ್ಲಿ ಭಕ್ತರು ದೀಡನಮಸ್ಕಾರ ಹಾಕುತ್ತ ಸಾಗಿದರು. ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ಸತ್ಯಮ್ಮದೇವಿಗೆ ಪಂಚಾಮೃತ ಅಭಿಷೇಕ ಮಾಡಿ, ದೇವಿಗೆ ಚಿನ್ನ, ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ರಾತ್ರಿ ಶ್ರೀ ಬೀರಲಿಂಗೇಶ್ವರ ನಾಟ್ಯ ಸಂಘದಿಂದ `ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ’ ಎಂಬ ಸುಂದರ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಾಯಿತು.