ನಾಟಕ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ : ಮೋಹನಕುಮಾರ ಕಟೀಲ

0
Closing Ceremony of Children's Kalarava-2024 Summer Camp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ದಿ. ಕೆ.ಎಚ್. ಪಾಟೀಲ ಅವರ ಜೀವನ ಚರಿತ್ರೆಯನ್ನು ನಾಟಕ ರೂಪದಲ್ಲಿ ಯಶಸ್ವಿಯಾಗಿ ಪ್ರದರ್ಶನ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಅವರ ಸಾಧನೆಗಳನ್ನು ಕಣ್ಮುಂದೆ ತೆರೆದಿಟ್ಟುರುವುದು ಶ್ಲಾಘನೀಯವಾಗಿದೆ ಎಂದು ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.

Advertisement

ಅವರು ಹುಲಕೋಟಿಯ ಸ್ವಾಮಿ ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗದುಗಿನ ನಟರಂಗ ಕಲ್ಚರಲ್ ಅಕಾಡೆಮಿ ಮತ್ತು ಟ್ರಸ್ಟ್ ವತಿಯಿಂದ ಜರುಗಿದ ಮಕ್ಕಳ ಕಲರವ-2024 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಮೇಶ ಕಿನ್ನಾಳ ಅವರ ನಿರ್ದೇಶನದ `ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲರು’ ಎಂಬ ಅವರ ಜೀವನ ಚರಿತ್ರೆ ಕುರಿತ ನಾಟಕವನ್ನು ವೀಕ್ಷಿಸಿದ ತರುವಾಯ ಮಾತನಾಡಿದರು.

ಇದಕ್ಕೂ ಮೊದಲು ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರೀತಿ ಕಬಾಡರ ನಿರ್ದೇಶನದ `ಹನುಮನ ಭಕ್ತಿ’ ಹಾಗೂ ಉಮೇಶ ಕಿನ್ನಾಳ ನಿರ್ದೇಶನದ `ಮೂರ್ಖರಾಜ’ ನಾಟಕಗಳನ್ನು ಮನೋಜ್ಞವಾಗಿ ಪ್ರದರ್ಶಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಜಿಮ್ಸ್ನ ಡಾ. ರಾಜಶೇಖರ ಮ್ಯಾಗೇರಿ, ಡಾ. ಜಿತೇಂದ್ರ ಮುಗಳಿ, ಯುವ ಮುಖಂಡರುಗಳಾದ ಶಿವಪ್ಪ ಬಳ್ಳಾರಿ, ನವೀನ ಬಂಡಾರಿ, ಸಮಾಜಸೇವಕಿ ಜಾನಕಿ ಚಿಕ್ಕನಗೌಡರ, ಪತ್ರಕರ್ತ ವೆಂಕಟೇಶ ಇಮರಾಪೂರ ಅವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಧ್ಯಾರ್ಥಿಗಳನ್ನು ಮತ್ತು ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ವೇದಿಕೆ ಮೇಲೆ ಕೆ.ಎಚ್. ಪಾಟೀಲ ವಿದ್ಯಾಮಂದಿರದ ಅಧ್ಯಕ್ಷ ಎಂ.ಆರ್. ಪಾಟೀಲ, ಕೆ.ಎಚ್. ಪಾಟೀಲ ಗ್ರಾಮ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಕೆ. ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಬಿ. ಕರಕಟ್ಟಿ, ತಾ.ಪಂ ಮಾಜಿ ಉಪಾಧ್ಯಕ್ಷ ಮೋಹನ ದುರಗಣ್ಣವರ, ತಾ.ಪಂ ಇಓ ಡಾ. ಎಚ್.ಎಸ್. ಜಿನಗಾ, ಅಪ್ಪುರಾಜ ಇವೆಂಟ್ಸ್ನ ಅಪ್ಪುರಾಜ ಭದ್ರಕಾಳಮ್ಮನಮಠ, ನಗರಸಭೆ ಸದಸ್ಯೆ ಲಕ್ಷ್ಮಿ ಸಿದ್ದಮ್ಮನಹಳ್ಳಿ, ಯುವ ಮುಖಂಡ ಇರ್ಫಾನ್ ಡಂಬಳ, ನಟರಂಗ ಕಲ್ಚರಲ್ ಅಕಾಡೆಮಿ ಮತ್ತು ಟ್ರಸ್ಟ್ನ ಅಧ್ಯಕ್ಷ ಸೋಮಶೇಖರಯ್ಯ ಚಿಕ್ಕಮಠ ಮುಂತಾದವರು ಉಪಸ್ಥಿತರಿದ್ದರು.

ನಟರಂಗ ಕಲ್ಚರಲ್ ಅಕಾಡೆಮಿ ಮತ್ತು ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಝೀ ಟಿವಿಯ ಮುಖ್ಯಸ್ಥರಾದ ಮೋಹನಕುಮಾರ ಕಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ನಾಟಕದಲ್ಲಿ ಶಿಬಿರದ ಮಕ್ಕಳು ಅತ್ಯದ್ಭುತವಾಗಿ ನಟಿಸಿದ್ದಾರೆ. ನನ್ನ ಅಜ್ಜನವರಾದ ದಿ. ಕೆ.ಎಚ್. ಪಾಟೀಲ ಅವರ ಹೋರಾಟ, ಬಡವರ ಹಾಗೂ ರೈತರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಮತ್ತು ಅವರ ಜೀವನದ ಅಂತಿಮ ಕ್ಷಣಗಳನ್ನು ಎಳೆ-ಎಳೆಯಾಗಿ ಬಿಚ್ಚಿದ್ದಾರೆ. ಈ ನಾಟಕ ನಿಜಕ್ಕೂ ಎಲ್ಲರನ್ನು ಭಾವುಕರನ್ನಾಗಿಸಿತು. ಇಂತಹ ಸಾಂಸ್ಕೃತಿಕ ಶಿಬಿರಗಳು ನಿರಂತರವಾಗಿ ನಡೆಯಲು ಹುಲಕೋಟಿ ಗ್ರಾಮದ ಹಿರಿಯರ ಸಹಾಯ, ಸಹಕಾರ ಸದಾ ಇರುತ್ತದೆ.
– ಕೃಷ್ಣಗೌಡ ಎಚ್.ಪಾಟೀಲ.
ಯುವ ಮುಖಂಡರು.


Spread the love

LEAVE A REPLY

Please enter your comment!
Please enter your name here