ವಿಜಯಸಾಕ್ಷಿ ಸುದ್ದಿ, ಗದಗ : ಇಪಿಎಸ್ ಪಿಂಚಣಿದಾರರ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಈಡೇರಿಸುವ ಹಾಗೂ ಸವೋಚ್ಛ ನ್ಯಾಯಾಲಯದ ಸುನೀಲಕುಮಾರ ಪ್ರಕರಣದ ತೀರ್ಪನ್ನು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಬೆಮಸಾ, ಕರಾಸಾ ಮತ್ತು ವಾಕರಸಾ ಸಾರಿಗೆ ನಿವೃತ್ತ ನೌಕರರ ಸಂಘವು ಆಗ್ರಹಿಸಿ ಮನವಿ ಸಲ್ಲಿಸಿತು.
ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಕೇಂದ್ರ ಸಚಿವರಿಗೆ ಮತ್ತು ನವದೆಹಲಿಯ ಕೇಂದ್ರ ಸರಕಾರದ ಸಿಬಿಟಿ ಅಧ್ಯಕ್ಷರಿಗೆ ಹುಬ್ಬಳ್ಳಿಯ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಚೇರಿಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು. ನಿವೃತ್ತ ಕಾರ್ಮಿಕರರನ್ನು ಅನಾವಶ್ಯಕವಾಗಿ ಅಡ್ಡಾಡಿಸದೇ ಅವರ ಕ್ಲೇಮ್‌ಗಳನ್ನು ಸರಿಯಾಗಿ ವಿಭಾಗಗಳ ನೆರವಿನೊಂದಿಗೆ ಇತ್ಯರ್ಥಪಡಿಸಿ ಕಾರ್ಮಿಕರಿಗೆ ನೆಮ್ಮದಿ ಕೊಡಲು ಮನವಿಯಲ್ಲಿ ವಿವರಿಸಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿವೃತ್ತ ನೌಕರರ ಸಂಘದ ಸಂಚಾಲಕ ಎಚ್.ಸಿ. ಕೊಪ್ಪಳ ಹಾಗೂ ಹನಮಂತಪ್ಪ ಎಚ್.ದೊಡ್ಡಮನಿ ಅವರ ನೇತೃತ್ವದಲ್ಲಿ ಎಲ್ಲ ನಿವೃತ್ತ ನೌಕರರು ಹುಬ್ಬಳ್ಳಿಯ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಹುಬ್ಬಳ್ಳಿಯ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಈ ಕುರಿತು ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗದಗ ಬಿ.ಜಿ. ಕೆಂಗಾರಕರ, ಜಿ.ಎಂ. ಮನಿಯಾರ, ಸೋಲೇಮಾನ ಬನ್ನೂರ, ಅಣ್ಣಿಗೇರಿ, ಮುಕಾಸಿ ಹಾಗೂ ಎಸ್.ಟಿ. ಮುಂಡರಗಿ, ಹಾವೇರಿಯ ಎಸ್.ಎನ್. ಕಮ್ಮಾರ, ಬೆಳಗಾವಿಯ ಎಂ.ಎನ್. ಪಾಟೀಲ, ಜಿ.ಆರ್. ಕುಂಬಾರ, ಹುಬ್ಬಳ್ಳಿಯ ಸುರೇಶ ಬೆಟಗೇರಿ, ಬಾಗಲಕೋಟಿಯ ಎಸ್.ಎನ್. ಕುಲಕರ್ಣಿ, ಹುಬ್ಬಳ್ಳಿ ಬಿ.ಎನ್. ಮಾಳಗಿ, ಧಾರವಾಡ ಎಂ.ವೈ. ತೊಲಗಿ, ಚಂದ್ರು ಕಾಂಬಳೆ, ಶಿರಸಿಯಿಂದ ರವೀಂದ್ರ ಪಾತ್ರಮಿರಕ್, ಹರೀಶ ಬಾಳೇಗುಡಿ ಹಾಗೂ ಲಕ್ಷö್ಮಣ ಅಂಬಲಿ ಸೇರಿದಂತೆ ಸಂಘದ ನಿವೃತ್ತ ನೌಕರರು ಪಾಲ್ಗೊಂಡಿದ್ದರು.