ವಿಜಯಸಾಕ್ಷಿ ಸುದ್ದಿ, ಮುಳಗುಂದ : ಅಂಜಲಿ ಹತ್ಯೆ ಆರೋಪಿಯಿಂದ ಹಲ್ಲೆಗೊಳಗಾದ ಮುಳಗುಂದ ಪಟ್ಟಣದ ಚಿಂದಿಪೇಟಿ ಓಣಿಯ ಲಕ್ಷ್ಮಿ ಮಾಹಾಂತೇಶ ಸೊರಟೂರ ಕುಟುಂಬಕ್ಕೆ ಜೀಜಾಮಾತಾ ಟ್ರಸ್ಟ್ ಹಾಗೂ ಅನ್ನಪೂರ್ಣೆಶ್ವರಿ ಮಹಿಳಾ ಸಂಘದ ಸರ್ವ ಸದಸ್ಯರು ಮನೆಗೆ ಭೇಟಿ ನೀಡಿ ಲಕ್ಷ್ಮಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಗೀತಾ ಜಾದಾವ ಮಾತನಾಡಿ, ಲಕ್ಷ್ಮಿ ಕುಟುಂಬ ತೀರಾ ಕಡು ಬಡತನದಲ್ಲಿದ್ದು ನಿತ್ಯ ಕೂಲಿ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಂಜಲಿ ಹತ್ಯೆಗೈದ ಆರೋಪಿ ಲಕ್ಷ್ಮಿ ಅವರಿಗೂ ಹಲ್ಲೆ ನಡೆಸಿರುವುದು ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ವೈದ್ಯಕೀಯ ವೆಚ್ಚವಾಗಿ ಸುಮಾರು 1.50 ಲಕ್ಷ ರೂ ಖರ್ಚಾಗಿದೆ. ಕೂಡಲೇ ಸರಕಾರ ಇವರ ಕುಟುಂಕ್ಕೆ ಸಹಾಯ ನೀಡಬೇಕು ಎಂದರು.
ಅಕ್ಕಮ್ಮಾ ನೀಲಗುಂದ, ರೇಣುಕಾ ಜಾದಾವ, ಶಾಂತವ್ವ ಹಿರೇಮಠ, ಅನಸವ್ವ ಆರೇರ, ಶೈಲಾ ಆರೇರ, ಯಲ್ಲಮ್ಮಾ ಮರಾಠಿ, ನಿರ್ಮಲಾ ಜಾದಾವ, ಲಕ್ಷ್ಮಿ ಜಾದಾವ, ರೇಣುಕಾ ಜಾದಾವ ಹಾಗೂ ಕುಟುಂಬದ ಸರ್ವ ಸದಸ್ಯರು ಇದ್ದರು.