HomeGadag Newsಸೇವಾ ಅವಧಿಯಲ್ಲಿ ಸರಳತೆ ರೂಢಿಸಿಕೊಳ್ಳಿ : ಶ್ರೀಕಾಂತ ಜಾದವ

ಸೇವಾ ಅವಧಿಯಲ್ಲಿ ಸರಳತೆ ರೂಢಿಸಿಕೊಳ್ಳಿ : ಶ್ರೀಕಾಂತ ಜಾದವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬದುಕು ಇರುವದು ಬಾಳಲು, ಬಾಡಲು ಅಲ್ಲ. ಬದುಕು ಇರುವದು ಸವಿಯಲು, ಸವೆಯಲು ಅಲ್ಲ. ಹಾಗಾಗಿ ನಿವೃತ್ತಿ ಜೀವನದಲ್ಲಿ ಹಲವು ನೇಮಗಳನ್ನು ಪಾಲಿಸುವ ಮೂಲಕ ಸುಖೀ ಜೀವನ ಲಭಿಸಲಿ ಎಂದು ಸಹಾಯಕ ಅಧೀಕ್ಷಕರಾದ ಶ್ರೀಕಾಂತ ಜಾದವ ಅಭಿಪ್ರಾಯಪಟ್ಟರು.

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಅಂಚೆ ಮನರಂಜನಾ ಕೂಟ ಹಾಗೂ ಪ್ರಧಾನ ಅಂಚೆ ಕಚೇರಿ ವತಿಯಿಂದ ಪ್ರಧಾನ ಅಂಚೆ ಕಚೇರಿ ಉಪ ಪ್ರಧಾನ ಅಂಚೆ ಪಾಲಕರಾಗಿ ಸೇವಾ ನಿವೃತ್ತಿ ಪಡೆದ ಸರಿತಾ ತೆರದಾಳ ಹಾಗೂ ಎಂಟಿಎಸ್ ಅಬ್ಬಾಸ ಅಲಿ ಬಾಗಲಕೋಟ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸೇವಾ ಅವಧಿಯಲ್ಲಿ ಶಿಸ್ತು, ಸಂಯಮ, ನಿಷ್ಠೆ, ಶ್ರದ್ಧೆ, ಸಮಯ ಪ್ರಜ್ಞೆ, ಸರಳತೆ ರೂಢಿಸಿಕೊಳ್ಳುವ ಅಗತ್ಯವಿದೆ. ಅಂದಾಗ ಮಾತ್ರ ಜೀವನದಲ್ಲಿ ಸಂತಸ ಕ್ಷಣಗಳನ್ನು ಅನುಭವಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಪ್ರಧಾನ ಅಂಚೆ ಪಾಲಕ ಆನಂದರಾವ ಹೊದ್ಲೂರ್, ಎಚ್.ಎಸ್. ಬಸವರಾಜ ಮಾತನಾಡಿದರು. ಸರಿತಾ ತೆರದಾಳ ಮಾತನಾಡಿ, 3 ದಶಕಗಳಿಂದ ಸೇವಾ ಅವಧಿಯಲ್ಲಿ ಪ್ರತಿ ಹಂತದಲ್ಲಿ ಸಹೋದ್ಯೋಗಿಗಳು ನೀಡಿದ ಸಹಾಯ, ಸಹಕಾರ ಅವಿಸ್ಮರಣೀಯ ಎಂದರು. ಇದಕ್ಕೂ ಮುನ್ನ ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎನ್.ಜಿ. ಭಂಗೀಗೌಡರ, ಸುನೀಲಕುಮಾರ ವಿ., ಪ್ರಧಾನ, ರೋಣದ ಅಂಚೆ ಉಪ ನಿರೀಕ್ಷಕ ಶ್ರೀಕಾಂತ ನೀಲಕಂಠಿ ನಿವೃತ್ತಿ ಪಡೆದ ಸಿಬ್ಬಂದಿಗಳನ್ನು ಸನ್ಮಾನಿಸಿದರು.

ಎಚ್.ಪಿ. ಅತ್ತಿಗೇರಿ, ರವಿ ವರ್ಣೇಕರ, ಮಂಜುನಾಥ ಕುರಿಯವರ, ಶರಣಪ್ಪ ನಾಯ್ಕರ, ಎಸ್.ವಿ. ಹಿರೇಮಠ, ಎ.ಎ. ದೊಡ್ಡಮನಿ, ಮುತ್ತಪ್ಪ ಜಿ, ಸೂರಪ್ಪ ಎಚ್, ಸಿದ್ಧಲಿಂಗೇಶ ಯಂಡಿಗೇರಿ, ವೆಂಕಟೇಶ ಆಕಳವಾಡಿ, ಶರಣಪ್ಪ ಬೇನಾಳ, ರವಿ ಜಾದವ, ಅಮರೇಶ ರಾಠೋಡ, ನಾಗರಾಜ ವಿಭೂತಿ, ಉಮೇಶ ಹಾದಿಮನಿ, ಬಸವರಾಜ ಮೊರಬದ, ರಾಘವೇಂದ್ರ ಕಮ್ಮಾರ, ಶಿವರಾಜ ಕ್ಷತ್ರಿಯವರ ಮತ್ತಿರರು ಪಾಲ್ಗೊಂಡಿದ್ದರು. ನಿಂಗಪ್ಪ ಹೂಗಾರ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!