ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಿ : ಎಸ್.ವಿ. ಸಂಕನೂರ

0
Resignation of Congress Minister Nagendra from Gadag District BJP Yuva Morcha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟರಿಗೆ ಮಣೆ ಹಾಕಿ, ಅವರನ್ನು ರಕ್ಷಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಮಾತು ಮಾತಿಗೂ ನುಡಿದಂತೆ ನಡೆಯುವ ಸರ್ಕಾರ ಎಂದು ಘೋಷಣೆ ಹಾಕುತ್ತಾರೆ.

Advertisement

ಆದರೆ ಭ್ರಷ್ಟ ಕಾಂಗ್ರೆಸ್ ಸರ್ಕಾರವು ಅಧಿಕಾರ ವಹಿಸಿಕೊಂಡಾಗಿನಿಂದಲೂ ಕೊಲೆ, ಸುಲಿಗೆ, ಭ್ರಷ್ಟಾಚಾರ ಇವೆಲ್ಲವುಗಳನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆರೋಪಿಸಿದರು.

ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾಂಗ್ರೆಸ್ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ನಗರದ ಹಳೆಯ ಡಿ.ಸಿ ಕಚೇರಿ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಮುಂದೆ ರಾಜೀನಾಮೆ ಪಡೆಯದಿದ್ದರೆ ಪ್ರತಿ ತಾಲೂಕಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಎಸ್.ಟಿ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಈಶ್ವರಪ್ಪ ರಂಗಪ್ಪನವರ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ಪಾತ್ರಧಾರಿ ಸಚಿವರು ಹಾಗು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಶಿಕ್ಷೆ ಆಗಬೇಕು ಮತ್ತು ದುರಪಯೋಗವಾದ ಹಣವನ್ನು ಪುನಃ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಎಂ.ಎಸ್. ಕರಿಗೌಡ್ರ, ನಗರ ಅಧ್ಯಕ್ಷರಾದ ಅನಿಲ ಅಬ್ಬಿಗೆರಿ, ಪ್ರಮುಖರಾದ ಲಿಂಗರಾಜ ಪಾಟೀಲ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ಅಶೋಕ ನವಲಗುಂದ, ಅಶೋಕ ಕುಡತಿನಿ, ಸುಧೀರ ಕಾಟಿಗರ, ಗಂಗಾಧರ ಹಬೀಬ, ಶಕ್ತಿ ಕತ್ತಿ, ರಾಗು ಪರಾಪೂರ, ಶಶಿಧರ ದಿಂಡೂರ, ನಾಗರಾಜ ಕುಲಕರ್ಣಿ, ಸುರೇಶ ಚಿತ್ತರಗಿ, ಸುರೇಶ ಮರಳಪ್ಪನವರ, ವಾಯ್.ಪಿ. ಅಡ್ನೂರ, ಯಲ್ಲಪ್ಪ ಶಿರಿ, ಪ್ರಶಾಂತ ನಾಯ್ಕರ, ನಾಗರಾಜ ತಳವಾರ, ವಿಜಯಲಕ್ಷ್ಮಿ ಮಾನ್ವಿ, ಕಮಲಾಕ್ಷೀ ಅಂಗಡಿ, ಯೋಗೇಶ್ವರಿ ಭಾವಿಕಟ್ಟಿ, ಮಾಸರಡ್ಡಿ, ಅಪ್ಪಣ್ಣ ಟೆಂಗಿನಕಾಯಿ, ಮಂಜುನಾಥ ತಳವಾರ, ಲಕ್ಷ್ಮಣ ವಾಲ್ಮೀಕಿ ವಿಶ್ವನಾಥ ಶಿರಿಗಣ್ಣವರ, ಅರವಿಂದ ಅಣ್ಣಿಗೇರಿ, ಅಶೋಕ ಕರೂರ, ಮುತ್ತಣ್ಣ ಮೂಲಿಮನಿ, ರಮೇಶ ಸಜ್ಜಗಾರ, ಪ್ರಕಾಶ ಕೊತಂಬರಿ, ನವೀನ ಕೊಟೆಕಲ್, ವೆಂಟಕೇಶ ಹಬೀಬ, ರಾಹುಲ ಸಂಕಣ್ಣವರ, ಮಂಜುನಾಥ ಶಾಂತಗೇರಿ, ವಿನೋದ ಹಂಸನೂರ ಸೇರಿದಂತೆ ಬಿಜೆಪಿ ಯುವ ಮೋರ್ಚಾ, ಎಸ್.ಟಿ ಮೋರ್ಚಾದ ಸರ್ವ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಬಹು ಕೋಟಿ ಭ್ರಷ್ಟಾಚಾರ ನಡೆಸಿದೆ. ಸಚಿವ ನಾಗೇಂದ್ರರಿಂದ ರಾಜೀನಾಮೆ ಪಡೆಯುವದನ್ನು ಬಿಟ್ಟು ತನಿಖೆ ಆಧರಿಸಿ ರಾಜೀನಾಮೆಯನ್ನು ಪಡೆಯುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಭ್ರಷ್ಟಾಚಾರದಲ್ಲಿ ಭಾಗಿಯಾದ ಸಚಿವ ನಾಗೇಂದ್ರರಿಂದ ಕೂಡಲೇ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಒಳಪಡಿಸಬೇಕು ಮತ್ತು ಈ ಹಗರಣವನ್ನು ಬಯಲಿಗೆಳೆದು ಪ್ರಾಣ ಕಳೆದುಕೊಂಡ ಚಂದ್ರಶೇಖರ್‌ರ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವನ್ನು ನೀಡಬೇಕು ಎಂದು ಎಸ್.ವಿ. ಸಂಕನೂರ ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here