ವಿಜಯಸಾಕ್ಷಿ ಸುದ್ದಿ, ಗದಗ : ಪೌರಕಾರ್ಮಿಕರ ಮಹಾಸಂಘ ಗದಗ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಪೌರ ನೌಕರರ ಶಾಖಾ ಸಂಘದ ಆಶ್ರಯದಲ್ಲಿ ಗದಗ-ಬೆಟಗೇರಿ ನಗರಸಭೆ ನೌಕರರ ಸೇವಾ ನಿವೃತ್ತಿ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಪಕೀರಪ್ಪ ಕಟ್ಟಿಮನಿ, ರಾಮು ಆಸಂಗಿ, ಎಸ್.ಎ. ಮಾಕನದಾರ, ಅಜೀಜ್‌ಸಾಬ್ ಬಳ್ಳಾರಿ ಇವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ನಗರಸಭೆ ಪೌರಾಯುಕ್ತರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು, ಲೆಕ್ಕ ಪರಿಶೋಧಕರು, ಕಚೇರಿಯ ವ್ಯವಸ್ಥಾಪಕರು. ಕಂದಾಯ ಅಧಿಕಾರಿಗಳು, ಸ್ಟೋರ್ ವಿಭಾಗ ನೌಕರರು ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಹೇಮೇಶ್ ಯಟ್ಟಿ, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ ಪೂಜಾರ್, ಗೌರವಾಧ್ಯಕ್ಷ ನಾಗೇಶ್ ಬಳ್ಳಾರಿ, ಶಾಖಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಹಾದಿಮನಿ, ಖಜಾಂಚಿ ಅರವಿಂದ್ ಕುರ್ತಕೋಟಿ, ಪ್ರಧಾನ ಕಾರ್ಯದರ್ಶಿ ಸಣ್ಣರಾಮಪ್ಪ ಬಳ್ಳಾರಿ, ವೆಂಕಟೇಶ್ ಕೆ.ಬಳ್ಳಾರಿ, ಲಕ್ಷ್ಮಣ್ ಚಲವಾದಿ, ಸಣ್ಣಪ್ಪ ಬೋಳಮ್ಮನವರ, ರಮೇಶ್ ಬಾರಕೇರ ಸೇರಿದಮತೆ ಪೌರ ಕಾರ್ಮಿಕರು ಹಾಗೂ ಪೌರ ನೌಕರರು ಪಾಲ್ಗೊಂಡಿದ್ದರು.