HomeUncategorizedರುದ್ರಭೂಮಿಯಲ್ಲಿ ಜನ್ಮದಿನ ಆಚರಣೆ

ರುದ್ರಭೂಮಿಯಲ್ಲಿ ಜನ್ಮದಿನ ಆಚರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಘಂಟಿ ತಮ್ಮ ಜನ್ಮದಿನವನ್ನು ಶಿರಹಟ್ಟಿ ಮತ್ತು ಹಂಗನಕಟ್ಟಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಆಚರಿಸಿಕೊಂಡರು.

ರಾತ್ರಿ 9ರ ವೇಳೆಗೆ ತಮ್ಮ ಸ್ನೇಹಿತರೊಂದಿಗೆ ರುದ್ರಭೂಮಿಯಲ್ಲಿ ವೇದಿಕೆಯನ್ನು ಸಜ್ಜುಗೊಳಿಸಿ, ಕೇಕ್ ಕತ್ತರಿಸಿ, ನಂತರ ಸಾಮೂಹಿಕವಾಗಿ ಎಲ್ಲರೂ ಭೋಜನ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಿ ಬೆಳಿಗ್ಗೆ ಮನೆಗೆ ತೆರಳುವ ಮೂಲಕ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರ.ಕಾ. ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಪರಮೇಶ ಪರಬ, ಬಸವರಾಜ ಸಂಶಿ, ಮಹೇಶ ಹಾರೋಗೇರಿ, ಇಸಾಕಅಹ್ಮದ ಆದ್ರಳ್ಳಿ, ಬೊಂಬಾಟ ಬಸಣ್ಣ, ಹೊನ್ನಪ್ಪ ಪೋಟಿ, ಆನಂದ ಮಾಳೇಕೊಪ್ಪ, ತಿಪ್ಪಣ್ಣ ಸಂಶಿ, ಮೈಲಾರಪ್ಪ ಹಾದಿಮನಿ, ಯಲ್ಲಪ್ಪ ಸೂರಣಗಿ, ಫಕ್ಕೀರೇಶ ಮ್ಯಾಟಣ್ಣವರ, ನೀಲಪ್ಪ ಪಡಗೇರಿ, ಮುತ್ತುರಾಜ ಭಾವಿಮನಿ, ಕರಿಯಪ್ಪ ಕುಳಗೇರಿ, ಮಂಜು ಹಮ್ಮಿಗಿ, ದೇವಪ್ಪ ಬಟ್ಟೂರ, ರಾಜು ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img