ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಹೊಳೆಯಲೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಕೂಡಲೇ ದುರಸ್ತಿಗೊಳಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕೆಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕಾಧ್ಯಕ್ಷ ಎಮ್.ಎಚ್. ನದಾಫ್ ನೇತೃತ್ವದಲ್ಲಿ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರವೇ ಉಪಾಧ್ಯಕ್ಷ ಬಸವರಾಜ್ ಹಾದಿಮನಿ, ರೋಣ ತಾಲೂಕು ವಕ್ತಾರ ಹನುಮಂತ ಹಳ್ಳಿಕೇರಿ, ಎಮ್.ಆರ್. ಖಾನ್ ಗುರೂಜಿ, ವಿದ್ಯಾರ್ಥಿ ಘಟಕ ಅಧ್ಯಕ್ಷ ಸಂಜು ಮಾದರ, ಉಪಾಧ್ಯಕ್ಷ ಕಾರ್ತಿಕ್ ಬಡಿಗೇರ, ಯಚ್ಚರಪ್ಪ ಹಾದಿಮನಿ, ಕೃಷ್ಣ ಲಮಾಣಿ, ರವಿ ಮನಗೂಳಿ, ಯಮನೂರ ನದಾಫ, ಪ್ರಶಾಂತ ಐವಳ್ಳಿ, ರಮೇಶ್ ಮುಂತಾದವರಿದ್ದರು.



