ವಿಜಯಸಾಕ್ಷಿ ಸುದ್ದಿ, ಗದಗ : ಪರಿಸರವನ್ನು ಉಳಿಸಬೇಕೆಂದರೆ ಮರಗಳನ್ನು ಬೆಳೆಸಬೇಕು. ಕೇವಲ ಮರಗಳನ್ನು ನೆಡುವುದು ಮಾತ್ರವಲ್ಲ ಆ ಮರಕ್ಕೆ ನೀರೆರೆದು ಕಾಪಾಡಿ ಅದು ದೊಡ್ಡದಾಗುವವರೆಗೂ ಸಂರಕ್ಷಿಸಬೇಕು. ಅಂದಾಗ ಮಾತ್ರ ಪರಿಸರ ಉಳಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ತಾಪಮಾನ ಹೆಚ್ಚಾಗಿ ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ. ಭೂಮಿಯ ತೇವಾಂಶ ಜಾಸ್ತಿ ಆಗಲು ನಾವು ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕು ಎಂದು ಪ್ರಾ. ಬಿ.ಬಿ. ಗೌಡರ ಅಭಿಪ್ರಾಯಪಟ್ಟರು.
ಕಲ್ಯಾಣಸಿರಿ ಕಲಾ ಹಾಗೂ ವಾಣಿಜ್ಯ ಮಾಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ.ರಾ.ಮು.ವಿ ಪ್ರಾದೇಶಿಕ ನಿರ್ದೇಶಕರಾದ ಸಿದ್ದಾರ್ಥ ಬಿ.ಎನ್. ಮಾತನಾಡಿ, ಎಲ್ಲರೂ ತಮ್ಮ ತಮ್ಮ ಪರಿಸರದಲ್ಲಿ ಒಂದೊಂದು ಗಿಡವನ್ನು ಬೆಳೆಸಿದರೆ ಅದು ಎಲ್ಲ ಪ್ರಾಣಿ-ಪಕ್ಷಿಗಳಿಗೆ ಸಹಾಯವಾಗುತ್ತದೆ.
ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಮುಂದುವರೆಯಬೇಕು ಎಂದು ಹೇಳಿದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಎಂ.ಎಚ್. ಕುರಿ ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.