ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮೌಲಾನಾ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಗದಗ ನಗರದ ಗಂಗಿಮಡಿಯಲ್ಲಿ ಮೌಲಾನಾ ಅಜಾದ್ ಶಾಲೆಯ ನೂತನ ಕಟ್ಟಡದ ಮುಂಭಾಗದಲ್ಲಿ ಗಿಡಗಳನ್ನು ನೆಡಲಾಯಿತು.
ಗದಗ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅಮಿತ್ ಬಿದರಿ ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಪ್ರತಿ ವರ್ಷ ವಿಶ್ವಾದ್ಯಂತ ಪರಿಸರ ದಿನವನ್ನು ಆಚರಿಸುತ್ತಿದ್ದು, ಕೇವಲ ಈ ದಿನ ಸಸಿಗಳನ್ನು ನೆಟ್ಟರೆ ಸಾಲದು. ಸಂರಕ್ಷಣೆ ಹಾಗೂ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂರ್ಭದಲ್ಲಿ ಗದಗ ತಾಲೂಕಾ ವಿಸ್ತರಣಾಧಿಕಾರಿ ಶರಣಪ್ಪ ಗರೇಬಾಳ, ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಲಮಾಣಿ, ಶಾಲಾ ಶಿಕ್ಷಕರಾದ ಯಶವಂತ ಬೇವಿನಕಟ್ಟಿ, ಜ್ಯೋತಿ ಕಮದೋಡ, ಸಿದ್ದಮ್ಮ ಗೌಡರ, ಲಾಡ್‌ಸಾಬ್ ಶಿರಹಟ್ಟಿ, ಮುಂತಾದವರು ಉಪಸ್ಥಿತರಿದ್ದರು.



