ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ನಟರಂಗ ಸಾಂಸ್ಕೃತಿಕ ಕೇಂದ್ರ ಗದಗ ಸಂಸ್ಥೆಯವರು ಆಯೋಜಿಸಿದ ಮಕ್ಕಳ ಕಲರವ-2024 ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಗೆ ಸುಮಾರು ವರ್ಷಗಳಿಂದ ಬೆನ್ನೆಲುಬಾಗಿ ನಿಂತು ಹಾಗೂ ಗದುಗಿನಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಿ ಕಲಾವಿದರ ಬೆಳವಣಿಗೆಗೆ ಹಾಗೂ ಅತ್ಯುತ್ತಮ ಕಲಾವಿದರನ್ನು ರಾಜ್ಯದ ಪ್ರಸಿದ್ಧ ಕನ್ನಡ ಟಿವಿ ಮಾಧ್ಯಮಗಳಿಗೆ ಕಳುಹಿಸಿರುವ ಹಾಗೂ ಸಂಸ್ಥೆಯ ಬೆಳುವಣೆಗೆಗೆ ಸಹಕಾರ ನೀಡುತ್ತಿರುವ ರೋಟರಿ ಗದಗ ಸೆಂಟ್ರಲ್‌ನ ಅಧ್ಯಕ್ಷ ವಿಜಯಕುಮಾರ್ ಹಿರೇಮಠ್ ಅವರಿಗೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ದೊಡ್ಡಣ್ಣ, ಕಲೆಯನ್ನು ಗುರುತಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ವಿಜಯಕುಮಾರ ಹಿರೇಮಠ ಅವರ ಕಾರ್ಯವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಝೀ ಕನ್ನಡದ ಪ್ರೊಡಕ್ಷನ್ ಹೆಡ್ ಆಗಿರುವ ಮೋಹನ್‌ಕುಮಾರ್ ಕೆ, ಡ್ರಾಮಾ ಜೂನಿಯರ್ಸ್ ಹಾಗೂ ಕಾಮಿಡಿ ಕಿಲಾಡಿಗಳ ಮೇನ್ ಮೆಂಟರ್ ಪ್ರಭುರಾಜ್, ನಟರಂಗ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ ಚಿಕ್ಕಮಠ, ರೋಟರಿ ಸದಸ್ಯರಾದ ಅಪ್ಪುರಾಜ ಭದ್ರಕಾಳಮ್ಮನಮಠ ಹಾಗೂ ನಗರದ ಖ್ಯಾತ ವೈದ್ಯರುಗಳಾದ ಡಾ. ವೀರೇಶ ಹಂಚಿನಾಳ, ಡಾ. ರಾಜಶೇಖರ ಮ್ಯಾಗೇರಿ ಹಾಗೂ ಮುರಿಗೇಶ ಶೆಟ್ಟರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.