ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 58ನೇ ಜನ್ಮದಿನದ ಅಂಗವಾಗಿ ಕರವೇ ಕಾರ್ಯಕರ್ತರು ನಗರದ ಗಾಂಧಿ ವೃತ್ತದ ಬಳಿ ಬಡವರಿಗೆ ಸೀರೆ, ಪ್ಯಾಂಟ್-ಶರ್ಟ್ ಹಾಗೂ ಉಪಹಾರದ ಜೊತೆಗೆ ಸಿಹಿ ವಿತರಣೆ ಮಾಡಿ ವಿಭಿನ್ನವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿನಾಯಕ ಬದಿ, ದಾವಲಸಾಬ್ ತಹಸಿಲ್ದಾರ್, ವಿರುಪಾಕ್ಷ ಹಿತ್ತಲಮನಿ, ಬಸವರಾಜ್ ಮೇಟಿ, ಆಶಾ ಜೂಲಗಡ್ಡ, ಹುಸೇನಬಿ ಬೂದಿಹಾಳ, ಕೃಷ್ಣ ಲಮಾಣಿ, ಮಾರುತಿ ಈಳಿಗೆರೆ, ಕುಮಾರ್ ರೇವಣ್ಣವರ್, ಮಹಾಂತೇಶ್ ನಡಿಗೇರ್, ಸಲೀಂ ಬೋದ್ಲೆೆಖಾನ್, ನಿಯಾಜ್ ಶೇಖ್, ಹುಸೇನ್ ಅಕ್ಕಿ, ಸಲೀಂ ಸಿರವಾರ, ಪ್ರಕಾಶ್ ಗಡದವರು, ಮುಬಾರಕ್ ಮುಲ್ಲಾ, ತೌಶಿಫ್ ಡಾಲಾಯತ್, ಆನಂದ್ ಹಂಡಿ, ಆದಿ ಪಾಟೀಲ, ಅಕ್ಬರ್ ಸರ್ಕಸ್, ಸಮೀರ್ ಬಾಳೆಕಾಯಿ, ಗೌಸ್ ಶಿರಹಟ್ಟಿ, ಇಸಾಕ್ ನದಾಫ್, ರವಿ ಮಲ್ಲಾಡದ, ಸುಲೇಮಾನ್ ಮಂಜಲಾಪುರ್, ಸದ್ದಾಂ ತಹಸೀಲ್ದಾರ್, ಯಲ್ಲೇಶ್ ಬಳ್ಳಾರಿ, ಜಾಫರ್, ಸುಹೇಲ್ ನಾಲಬಂದ್ ಮುಂತಾದವರಿದ್ದರು.