ವಿಜಯಸಾಕ್ಷಿ ಸುದ್ದಿ, ಗದಗ : ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಿಮಿತ್ತ ಗದಗ-ಬೆಟಗೇರಿ ನಗರಸಭೆ ವಾರ್ಡ್ ನಂ. 13ರಲ್ಲಿ ನಗರಸಭೆ ಸದಸ್ಯ ಮುತ್ತು ಮುಶಿಗೇರಿ ನೇತೃತ್ವದಲ್ಲಿ ನಿವೃತ್ತ ವೀರಯೋಧರಿಗೆ, ವಾರ್ಡಿನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಪ್ರವಾಸ ಕೈಗೊಂಡು ಬಂದಿರುವ ಹಾಗೂ ವಾರ್ಡಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮುತ್ತು ಮುಶಿಗೇರಿ ಮಾತನಾಡಿ, ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ ದೇಶ ಸೇವೆಗೈದ ನಿವೃತ್ತ ಯೋಧರಿಗೆ, ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದ ಭಕ್ತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮಲ್ಲಿ ಪ್ರಕಾಶಗೌಡ ಕೆಂಚನಗೌಡ್ರ, ಹುಲಪ್ಪ ತಿಮ್ಮಣ್ಣ ಹೊಸಮನಿ, ನಿಂಗಪ್ಪ ಕಲಕೇರಿ, ಮಹಾದೇವಪ್ಪ ಬಟ್ಟಾರ, ಶಂಕರಮ್ಮ ಬಟ್ಟಾರ, ಜಯಶ್ರೀ ಅಣ್ಣಿಗೇರಿ, ರಾಜಶೇಖರ ಅಣ್ಣಿಗೇರಿ, ಅಂಜಲಿ ಪಮ್ಮಾರ, ಸಾಕ್ಷಿ ಚಿಂಡ್ರಿ, ಶುಭಾಂಗಿ ದಹಿಂಡೆ, ವೀಣಾ ಸಿಂದೋಗಿ, ವೈಷ್ಣವಿ ಇಟಗಿ, ವರುಣ ಕಾಮತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಗರಾಜ ಉಮಚಗಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮುಖಂಡರಾದ ಗುರುರಾಜ ತಿಲ್ಲಿಹಾಳ, ಮಂಜುನಾಥ ಕೋಟ್ನಿಕಲ್, ಬಸಪ್ಪ ರಣತೂರ, ಶೃತಿ ಮುತ್ತು ಮುಶಿಗೇರಿ, ರಾಘವೇಂದ್ರ ಗೌಡರ, ಹೊಸಮನಿ, ಮಠಪತಿ, ಬಟ್ಟೂರ ಸಹೋದರರು ಸೇರಿದಂತೆ ವಾರ್ಡಿನ ಗುರುಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.