ವಿಜಯಸಾಕ್ಷಿ ಸುದ್ದಿ, ನರೇಗಲ್ : ವಿದ್ಯಾರ್ಥಿಗಳು ಅಕ್ಷರ ಜ್ಞಾನವನ್ನು ಪಡೆಯುವ ಮೂಲಕ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೂಡ್ಲೆಪ್ಪ ಹಡಪದ ಹೇಳಿದರು.
ಸಮೀಪದ ಮಾರನಬಸರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರ ಜ್ಞಾನಕ್ಕೆ ಅತ್ಯಂತ ಮಹತ್ವವಿದೆ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತಿಳಿದುಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬಾಳಲು ಸಾಧ್ಯ ಎಂದರು.
ಬಸವರಾಜ ಮಾರನಬಸರಿ ಮಾತನಾಡಿ, ಸದೃಢ ನಾಡು ಕಟ್ಟಲು ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಅಕ್ಷರ ಜ್ಞಾನ ಹೊಂದುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಅಕ್ಷರ ಜ್ಞಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅನೇಕ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಸರ್ಕಾರ ನೀಡುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಜೊತೆಗೆ ಸಮುದಾಯದ ಉನ್ನತಿಗೆ ಶ್ರಮಿಸಬೇಕು ಎಂದರು.
ಈ ವೇಳೆ ಮುತ್ತಪ್ಪ ಬಾರಕೇರ, ಅನಿತಾ ಪತ್ತಾರ, ಕವಿತಾ ಹಿರೇಮಠ, ಶರಣಮ್ಮ ಡಂಬಳ, ಅನ್ನಪೂರ್ಣ ಗಡಾದ, ಎಸ್.ಇ. ಹೊರಪೇಟಿ, ಎಫ್.ಬಿ. ಮಾದರ, ಜೆ. ಜಾನಪಾಲ್, ಎಂ.ಕೆ. ಸರ್ವಿ, ಎಸ್.ಎಸ್. ಅವಟಿ, ಬಿ.ಎಸ್. ಗುಗ್ಗರಿ, ಎಂ.ಜಿ. ಮಕಾನದಾರ, ಬಿ.ಎಫ್. ಚೌಡಕಿ ಮುಂತಾದವರಿದ್ದರು.