ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ನಗರ ಘಟಕದಿಂದ ಪಟ್ಟಣದ ವೃದ್ಧಾಶ್ರಮ, ದೊಡ್ಡೂರ ರಸ್ತೆಯಲ್ಲಿನ ಮೈಲಾರಲಿಂಗೇಶ್ವರ ಶಿಬಾರಗಟ್ಟಿ ಮತ್ತು ಕೋರ್ಟ್ ಸರ್ಕಲ್ ಹತ್ತಿರ ಉದ್ಯಾನದಲ್ಲಿ ಅಶ್ವತ್ಥ ವೃಕ್ಷದ ಸಸಿ ನೆಡುವ ಮೂಲಕ ಮೋದಿಜಿ ಆಡಳಿತಕ್ಕೆ ಶುಭಕೋರಲಾಯಿತು.
ಈ ಕಾರ್ಯದಲ್ಲಿ ಪಕ್ಷದ ಮುಖಂಡರಾದ ನಿಂಗಪ್ಪ ಬನ್ನಿ, ದುಂಡೇಶ ಕೊಟಗಿ, ಮಂಜುನಾಥ ಗೊರವರ, ಸೋಮಣ್ಣ ಉಪನಾಳ, ವಿನಯ ಪಾಟೀಲ, ಗಂಗಾಧರ ಮೆಣಸಿನಕಾಯಿ, ಶಕ್ತಿ ಕತ್ತಿ, ಅನಿಲ ಮುಳಗುಂದ, ವಿಜಯ ಕುಂಬಾರ, ಉಳವೇಶ ಪಾಟೀಲ, ಹಾಲಪ್ಪ ಸೂರಣಗಿ, ರಾಮು ಪೂಜಾರ, ಗಿರೀಶ ಚೌರಡ್ಡಿ, ಪ್ರಕಾಶ ಮಾದನೂರ, ಸತೀಶ ಕಾಡಣ್ಣವರ, ಮಂಜಯ್ಯ ಕಲಕೇರಿಮಠ, ಬಸವರಾಜ ಚಕ್ರಸಾಲಿ, ಸಂತೋಷ ಜಾವೂರ, ರಾಮು ನಾಯಕ, ಆಕಾಶ ಸೌದತ್ತಿ ಸೇರಿ ಹಿರಿಯರು, ಮುಖಂಡರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.