ವಿಜಯಸಾಕ್ಷಿ ಸುದ್ದಿ, ಗದಗ : ನೂತನ ವಿಶ್ವಕರ್ಮ ಭವನ ಉದ್ಘಾಟನೆ, ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ತನು, ಮನ, ಧನದಿಂದ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ವಿನಂತಿಸಿದರು.
ಅವರು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯದಲ್ಲಿ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಸರ್ವಾಂಗೀಣ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಬಹು ಮುಖ್ಯ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಸಮಾಜ ಪ್ರಥಮ ಆದ್ಯತೆ ನೀಡಿದೆ. ಅವರನ್ನುಇನ್ನಷ್ಟು ಉತ್ತೇಜಿಸಿ ಪ್ರತಿಭಾವಂತರಾಗಿಸಲು ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ. ಮಕ್ಕಳು ಹೆಸರು ನೊಂದಾಯಿಸಲು ಆಯ್ಕೆ ಸಮಿತಿಯ ಪ್ರಾ. ಕೆ.ಎಸ್. ಬಡಿಗೇರ-9482176166, ಸಿ.ಎಂ. ಪತ್ತಾರ-9482176166, ಬಿ.ಎಂ. ಬಡಿಗೇರ-9482001657, ಆರ್.ಎಮ್. ಬಡಿಗೇರ-9916765934, ವಿಜಯಕುಮಾರ ರಾಜನಾಳ-9341804366 ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ವಿನಂತಿಸಿದರು.
ನಿರ್ದೇಶಕರಾದ ಬಿ.ಎಂ. ಬಡಿಗೇರ ಹಾಗೂ ಪ್ರಾ. ಕೆ.ಎಸ್. ಬಡಿಗೇರ ಮಾತನಾಡಿ, ಜೂ.16ರಂದು ಬೆಳೆಗ್ಗೆ 9.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಶಿರೋಳ ಜ.ಶ್ರೀ ಯಚ್ಚರಸ್ವಾಮಿ, ಗವಿಮಠದ ಶ್ರೀ ಅಭಿನವ ಯಚ್ಚರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಿವೃತ್ತ ಅಧಿಕಾರಿ ಕೆ.ಎಂ. ಗುಂಡಪ್ಪ, ನಿರ್ದೇಶಕರಾದ ಪ್ರಾ. ಕೆ.ಎಸ್. ಬಡಿಗೇರ, ರವೀಂದ್ರ ಕಮ್ಮಾರ, ಬಿ.ಎಂ. ಬಿಡಿಗೇರ, ಬಿ.ಎಂ. ಯರಕರದ, ಮೌನೇಶ ಸಿ.ಬಡಿಗೇರ, ರಿಂದಮ್ಮ ವಡ್ಡಟ್ಟಿ, ಮಹೇಶ ಕಮ್ಮಾರ, ದ್ಯಾಮಣ್ಣಾ ಕಮ್ಮಾರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ ನಿರೂಪಿಸಿ ವಂದಿಸಿದರು.