ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಶ್ರೀ ಅನ್ನದಾನೇಶ್ವರ ಸಂಘ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಕೆ. ಹಿರೇಮಠ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಯಾವುದೇ ದೇಶ ಅಥವಾ ಸಮಾಜದ ಬೆಳವಣಿಗೆಗೆ ತಡೆಗೋಡೆಯಾದ ಕೆಟ್ಟ ಪದ್ಧತಿಯಾಗಿದೆ. ಶಿಕ್ಷಣ ಕಲಿತು ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ಕಿರಿಯ ವಯಸ್ಸಿನಲ್ಲಿ ಮಕ್ಕಳನ್ನು ಕೆಲಸಕ್ಕೆ ಹಚ್ಚುವುದು ಘೋರ ಅಪರಾಧವಾಗಿದೆ.
ನಿಮ್ಮ ಹತ್ತಿರದಲ್ಲಿ ಎಲ್ಲಾದರೂ ಬಾಲಕಾರ್ಮಿಕ ಪದ್ಧತಿ ಕಂಡುಬಂದರೆ ತಕ್ಷಣ 1098 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು ಎಂದರು.
ಶಿಕ್ಷಕ ಅಶೋಕ ಇರಕಲ್ ಬಾಲಕಾರ್ಮಿಕ ಪದ್ಧತಿ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ವಿ.ಎಂ. ಕರಡಿ, ಶಿಕ್ಷಕರಾದ ಮಂಜುನಾಥ ಹೆಬ್ಬಳ್ಳಿ, ಯಲ್ಲಪ್ಪ ಚೆಳ್ಳೊರ, ಮಂಜುನಾಥ ಕಡೆಮನಿ, ಅಜೀಂ ಜವಳಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.