HomeGadag Newsಈಶ್ವರೀಯ ವಿಶ್ವ ವಿದ್ಯಾಲಯದಿಂದ ಉಚಿತ ಯೋಗ ಶಿಬಿರ

ಈಶ್ವರೀಯ ವಿಶ್ವ ವಿದ್ಯಾಲಯದಿಂದ ಉಚಿತ ಯೋಗ ಶಿಬಿರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಈಶ್ವರೀಯ ವಿಶ್ವ ವಿದ್ಯಾಲಯವು ಸರ್ವ ಜನತೆಯ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಉಚಿತವಾಗಿ ಯೋಗ ಮತ್ತು ಯೋಗಾಸನ ಶಿಬಿರವನ್ನು ಏರ್ಪಡಿಸಿದೆ.

ಶಿಬಿರದಲ್ಲಿ ಪ್ರಾರ್ಥನೆ, ಯೋಗಾಸನ, ಕಪಾಲಭಾತಿ, ಪ್ರಾಣಾಯಾಮ, ಧ್ಯಾನ/ ಮೆಡಿಟೇಶನ್ ಕಲಿಸಲಾಗುವುದು. ಮನಸ್ಸಿನ ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುವುದು, ಮನಸ್ಸಿನ ಒತ್ತಡ ಮುಕ್ತತೆಗೆ ವಿಧಿ ತಿಳಿಸುವುದು, ಚಿಂತೆ ಮತ್ತು ಅನಾವಶ್ಯಕ ಚಿಂತನೆಗಳಿಂದ ಮುಕ್ತ ಮಾಡಿಸುವುದು, ಬೆನ್ನು ನೋವು, ಕಾಲಿನ ಗಂಟು ನೋವುಗಳ ಉಪಶಮನ ತಿಳಿಸುವುದು, ಹೈ ಬಿಪಿ, ಡಯಾಬಿಟೀಸ್, ಅಸ್ಥಮಾ, ಎಸಿಡಿಟಿ ನಿಯಂತ್ರಣಗೊಳಿಸುವುದು, ಮೂಲವ್ಯಾಧಿ, ಮೈಗ್ರೇನ್, ಹೃದಯ ರೋಗಗಳನ್ನು ಹತೋಟಿಗೆ ತರುವುದು, ಮೌಲ್ಯಯುಕ್ತ ಸುಖೀ ಸಂಸಾರ ನಿರ್ಮಾಣಗೊಳಿಸುವುದು, ಆರೋಗ್ಯ ಕಂಟಕವಾಗಿರುವ ದುಶ್ಚಟದಿಂದ ಮುಕ್ತಗೊಳಿಸುವುದು ಈ ಶಿಬಿರದ ಉದ್ದೇಶವಾಗಿದೆ.

ಜೂನ್ 14ರಿಂದ ಜೂನ್ 30ರವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ 7.30ರವರೆಗೆ ನಗರದ
ಬ್ರಹ್ಮಕುಮಾರಿಸ್-ಬಸವೇಶ್ವರ ನಗರ, ಆಧ್ಯಾತ್ಮಿಕ ಸಂಸ್ಕೃತಿ ಭವನ-ಡಂಬಳನಾಕಾ, ಸಿದ್ಧರಾಮೇಶ್ವರನಗರ ಹೊಸ್ಪೆಟ್ಚೆಕ್-ಬೆಟಗೇರಿಯ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಯೋಗ ಮತ್ತು ಯೋಗಾಸನ ಶಿಬಿರ ಉಚಿತವಾಗಿ ನಡೆಯಲಿದೆ. ಶಿಬಿರದಲ್ಲಿ ನೋಂದಾಯಿಸಲು ತಮ್ಮ ಹೆಸರು, ವಯಸ್ಸು ಮತ್ತು ಯಾವ ಸ್ಥಳದಲ್ಲಿ ಭಾಗವಹಿಸುತ್ತೀರಿ ಎನ್ನುವ ವಿವರಗಳನ್ನು ತಿಳಿಸಲು-6360753992 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!