ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಕಲಾ ವೈಭವ ಹಾಗೂ ಕಲಾ ವಿವಿಧೋದ್ದೇಶಗಳ ಸಂಸ್ಥೆಯ ನಿರ್ದೇಶಕಿ ಹಾಗೂ ಭರತನಾಟ್ಯ ಕಲಾವಿದೆಯಾಗಿ ಹೆಸರು ಮಾಡಿರುವ ಭವ್ಯ ಸೋಮನಾಥ ಕತ್ತಿ ಎಪ್ರಿಲ್/ಮೇ ತಿಂಗಳಲ್ಲಿ ಗಂಧರ್ವ ಮಹಾವಿದ್ಯಾಲಯ ನಡೆಸಿದ ಭರತನಾಟ್ಯ ವಿಭಾಗದ ವಿಶಾರದ ಪೂರ್ಣ ಪರೀಕ್ಷೆಯಲ್ಲಿ 635 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಸ್ತುತ ಭವ್ಯ ಅವರು ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಭರತನಾಟ್ಯ ತರಗತಿಗಳ ಮೂಲಕ ನೂರಾರು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಸ್ವತಃ ಕಲಾವಿದೆಯಾಗಿರುವ ಇವರು ನಾಡಿನ ಅನೇಕ ಕಡೆಗಳಲ್ಲಿ ಹಲವಾರು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿ ಗಮನಸೆಳೆದಿದ್ದಾರೆ. ಇವರು ಸದ್ಯ ಪುತ್ತೂರಿನ ನೃತ್ಯ ಗುರು ವಿ.ಮಂಜುನಾಥ ಎನ್.ಪುತ್ತೂರು ಇವರಲ್ಲಿ ವಿದ್ವತ್ ನೃತ್ಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಭರತನಾಟ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ ಭವ್ಯ ಅವರಿಗೆ ಪಟ್ಟಣದ ಅನೇಕ ಮುಖಂಡರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಕಲಾ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.