ವಿಜಯಸಾಕ್ಷಿ ಸುದ್ದಿ, ಗದಗ : ಸಾಹಿತಿ ಹಾಗೂ ಕೊಪ್ಪರ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ. ರವೀಂದ್ರ ಕೊಪ್ಪರ ಅವರ 78ನೇ ಜನ್ಮ ದಿನಾಚರಣೆಯನ್ನು ಕೊಪ್ಪರ ಅಕಾಡೆಮಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರೊಫೆಸರ್ ವಿ.ಬಿ. ತಾಳಿ, ಕೊಪ್ಪರ ಜೊತೆಗಿನ ಬಾಂಧವ್ಯ ಹಾಗೂ ಅವರ ಶಿಸ್ತಿನ ಜೀವನ ಶೈಲಿ ಬಗ್ಗೆ ಮಾತನಾಡಿದರು.
ಕೊಪ್ಪರರ ಶಿಷ್ಯ ಪಿಡಿಒ ಅಮೀರ ನಾಯಕ್, ಮುರಾಧಖಾನ್, ನಿವೃತ್ತ ವೈದ್ಯಾಧಿಕಾರಿ ಯಶೋಧಾ ಭಜಂತ್ರಿ, ಮಲ್ಲಿಕಾರ್ಜುನ ಖಂಡೆಮ್ಮನವರ ಮಾತನಾಡಿದರು.
ಕುಮಾರ ಸ್ವಾಮಿ ಹಾಗೂ ಜಲಮೂಲ ತಜ್ಞರಾದ ಮಲ್ಲಿಕಾರ್ಜುನ ಪ್ರಾರ್ಥನೆ ಮಾಡಿದರು. ಕೊಪ್ಪರ ಅವರ ಪುತ್ರರಾದ ರಘು ಕೊಪ್ಪರ ಹಾಗೂ ಶ್ರೀಕಾಂತ ಕೊಪ್ಪರ ಆಗಮಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಶಿಲ್ಪ ಕೊಪ್ಪರ, ವಿಹಾನ ಕೊಪ್ಪರ, ಸುನಿಲ ಹಲಕುರ್ಕಿ, ಮಲ್ಲಿಕಾರ್ಜುನ ಹಡ್ಕರ್, ಕುಮಾರ ಗುತ್ತರಗಿ, ಮುರಾಧಖಾನ, ನಿವೃತ್ತ ಪೊಲೀಸ್ ಅಧಿಕಾರಿ ವಾದಿರಾಜ ಕೌಜಲಗಿ, ಹರೀಶ, ವಿರುಪಾಕ್ಷಿ ಹಿರೇಮಠ, ದಯಾನಂದ ತಡಸ ಮುಂತಾದವರು ಭಾಗವಹಿಸಿದ್ದರು.