ವಿಜಯಸಾಕ್ಷಿ ಸುದ್ದಿ, ನರೇಗಲ್ : ಬಿಸಿಎ ಪದವೀಧರನಾಗಿದ್ದರೂ ನೌಕರಿಯ ಆಸೆ ಮಾಡದೆ ದೇಶ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಯೋಧ ಮಂಜುನಾಥ ಕಳಕಪ್ಪ ಹನುಮನಾಳ ಮರಳಿ ನರೇಗಲ್ಲ ಗ್ರಾಮಕ್ಕೆ ಬಂದಾಗ ಹಾರ್ದಿಕವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ನಿಂಗನಗೌಡ ಲಕ್ಕನಗೌಡ್ರ, ಮಂಜುನಾಥ ಬಿಸಿಎ ಕಲಿತು ಯಾವುದಾದರೂ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ವೇತನ ಪಡೆದು ಹಾಯಾಗಿರಬಹುದಿತ್ತು. ಆದರೆ ಅವನಿಗೆ ದೇಶ ಸೇವೆ ಮಾಡುವ ಆಸೆ ಇದ್ದುದರಿಂದ ಕಳೆದ ಅಕ್ಟೋಬರ್‌ನಲ್ಲಿ ಬಿಎಸ್‌ಎಫ್‌ನ ಜಿಡಿ ಪರೀಕ್ಷೆಯಲ್ಲಿ ಪಾಸಾಗಿ ತರಬೇತಿ ಪಡೆದು ಮರಳಿ ಊರಿಗೆ ಬಂದಿದ್ದಾನೆ. ಈ ಮೂಲಕ ಮಂಜುನಾಥ ಯುವಕರಿಗೆಲ್ಲ ಮಾದರಿಯಾಗಿದ್ದಾನೆ. ರೈತನ ಮಗನೊಬ್ಬ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾನೆ. ತನ್ನ ಸೇವೆಯ ಮೂಲಕ ಈ ಊರಿನ ಕೀರ್ಕಿಯನ್ನು ಆತ ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಿ.ಎ. ಅಂಗಡಿ, ಮುತ್ತಣ್ಣ ಹಡಪದ, ಶರಣಪ್ಪ ನೀರಲಗಿ, ಶಿಲಾರಸಾಬ ಬಂಕಾಪೂರ, ಕುಮಾರ ಕರಮುಡಿ, ಉಮಾದೇವಿ, ಕಳಕಪ್ಪ, ಪ್ರವೀಣ ಅಣಗೌಡ್ರ, ಸುಮಂತ ಗ್ರಾಮಪುರೋಹಿತ ಮುಂತಾದವರಿದ್ದರು.